ಸೋಮವಾರ ಸಂಜೆ ಕೆಲವು ಗಂಟೆಗಳ ಕಾಲ ಫೇಸ್‌ಬುಕ್, ವಾಟ್ಸಾಪ್, ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಂಗಳು ಕೆಲಸ ಮಾಡದೆ ಜನರು ಕಂಗಾಲಾಗಿದ್ದರು.
ತಮ್ಮ ದೈನಂದಿನ ಚಟುವಟಿಕೆ, ಮನರಂಜನೆ ಮುಂತಾದವುಗಳಿಗೆ ಈ ಸಾಮಾಜಿಕ ಮಾಧ್ಯಮಗಳನ್ನು ಅವಲಂಬಿಸಿರುವ ಜನರಿಗೆ ದಿಕ್ಕೇ ತೋಚದಂತಾಗಿತ್ತು. ಈ ಕುರಿತು ಸಾಕಷ್ಟು ಸಂಖ್ಯೆಯಲ್ಲಿ ಜನರು ಟ್ವೀಟ್, ವಾಟ್ಸಪ್ ಮೂಲಕ ದೂರು ನೀಡಿದ್ರು. ಕೊನೆಗೂ ಫೇಸ್‌ಬುಕ್ ಸಂಸ್ಥೆ ಈ ಸಮಸ್ಯೆಯನ್ನು ಸರಿಪಡಿಸಿದೆ. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತು ಈ ಕೆಲವೇ ಗಂಟೆಗಳಲ್ಲಿ ೭ ಬಿಲಿಯನ್ ಡಾಲರ್ ಕುಸಿದಿದೆ. ಹೀಗಾಗಿ ಸಿರಿವಂತ ವ್ಯಕ್ತಿಗಳ ಪಟ್ಟಿಯಲ್ಲಿ ಜುಕರ್‌ಬರ್ಗ್ ಸ್ಥಾನ ಕುಸಿದಿದೆ.