ಶಿವಮೊಗ್ಗ : ನಿಮ್ಮ ಕನ್ನಡ ಮೀಡಿಯಂ ೨೪*೭ ಕೇಬಲ್ ಹಾಗೂ ಡಿಜಿಟಲ್ ವಾಹಿನಿಗೆ ಒಂದು ವರ್ಷದ ಸಂಭ್ರಮ. ಈ ಸಂಭ್ರಮದ ಕ್ಷಣದ ಜೊತೆಗೆ ನಮ್ಮ ವಾಹಿನಿಯ ಆಪ್ ಬಿಡುಗಡೆ ಕಾರ್ಯಕ್ರಮ ಕೂಡ ನಡೆಯಿತು. ಸಂಸದರಾದ ಬಿ.ವೈ.ರಾಘವೇಂದ್ರ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆಪ್ ಡೌನ್‌ಲೋಡ್ ಮಾಡಿ ಆಪ್ ಬಿಡುಗಡೆ ಮಾಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಡಿ.ಎಸ್.ಅರುಣ್, ಬಿಜೆಪಿ ಮುಖಂಡರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಕುವೆಂಪು ವಿವಿ ಸಿಂಡಿಕೇಟ್ ಮೆಂಬರ್ ಬಳ್ಳಕೆರೆ ಸಂತೋಷ್, ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ವಾಹಿನಿಗೆ ಶುಭ ಹಾರೈಸಿದರು.
ಕಳೆದ ಒಂದು ವರ್ಷದಿಂದ ಶಿವಮೊಗ್ಗ ಜಿಲ್ಲೆಯ ಜನಮನದ ವಾಹಿನಿಯಾಗಿ ಕನ್ನಡ ಮೀಡಿಯಂ ಚಾನೆಲ್ ಗುರುತಿಸಿಕೊಂಡಿದೆ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಸುದ್ದಿಗಳನ್ನು ನಿಮಗೆ ತಲುಪಿಸುವ ಜೊತೆಗೆ ಇನ್ನು ಅನೇಕ ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾ ಬಂದಿದ್ದೇವೆ.