ಹೈಲೆಟ್ಸ್:
ಮನೆಗೆ ಬೀಗ ಹಾಕುವ ಮುಂಚೆ ಎಚ್ಚರ
ಬಾಗಿಲು ಮುರಿದು ಕಳ್ಳರ ಕೈಚಳಕ
ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ
ಮರದ ಡೋರ್ ಮುರಿದುಕೊಂಡು ಎಂಟ್ರಿ
ಶಿವಮೊಗ್ಗ:
ಮನೆಗೆ ಬೀಗ ಹಾಕಿ... ಬೇರೆ ಊರುಗಳಿಗೆ ಹೋಗೋ ಜನರು ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಚಾಲಾಕಿ ಕಳ್ಳರು ಯಾವಾಗ ಕೈಚಳಕ ತೋರಿಸ್ತಾರೋ ಗೊತ್ತಿಲ್ಲ. ಶಿವಮೊಗ್ಗ ನಗರದ ಶಿವಪ್ಪನಾಯಕ ಬಡಾವಣೆಯಲ್ಲಿ ಯಾರೂ ಇಲ್ಲದ ಮನೆಗೆ ಬಾಗಿಲು ಮುರಿದುಕೊಂಡು ಎಂಟ್ರಿ ಕೊಟ್ಟು, ಕಳ್ಳತನ ಮಾಡಿಕೊಂಡು ಪಾರಾರಿಯಾಗಿದ್ದಾರೆ. ಸಂಧ್ಯಾ ಎಂಬುವರ ಮನೆಯಲ್ಲಿ ಈ ಕೃತ್ಯ ಎಸಗಲಾಗಿದೆ. ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಹಲವಾರು ತಿಂಗಳಿನಿಂದ ಯಾರು ಇಲ್ಲದಿರೋದನ್ನು ಗಮನಿಸಿದ ಖದೀಮರು ಕೃತ್ಯ ಎಸಗಿದ್ದಾರೆ. ಮನೆಯೊಳಗಡೆ ಇರೋ ವಸ್ತುಗಳನ್ನೆಲ್ಲಾ ಜಾಲಾಡಿದ್ದಾರೆ. ವಾಡ್ರಬ್‌ಗಳಲ್ಲಿ ಬಂಗಾರ ಮತ್ತು ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ವಸ್ತುಗಳನೆಲ್ಲಾ ಚಲ್ಲಾಪಿಲ್ಲಿಯಾಗಿ ಮಾಡಿದ್ದು, ದೇವರ ಮನೆಯಲ್ಲಿರುವ ಬೆಳ್ಳಿ ದೀಪಗಳನ್ನು ಮಾತ್ರ ಮಹಾಶಯರು ಮುಟ್ಟಿಲ್ಲ. ಯಾರೋ ನೋಡಿಕೊಂಡು ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ವಿನೋಬನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.