ನಿಮ್ಮ ಕನ್ನಡ ಮೀಡಿಯಂ ವಾಹಿನಿಗೆ ಒಂದು ವರ್ಷದ ಸಂಭ್ರಮ ಹಿನ್ನೆಲೆ ವಾಹಿನಿಯ ಆಪ್ ಬಿಡುಗಡೆ ಕಾರ್ಯಕ್ರಮ

ಶಿವಮೊಗ್ಗ : ನಿಮ್ಮ ಕನ್ನಡ ಮೀಡಿಯಂ ೨೪*೭ ವಾಹಿನಿಗೆ ಶುಕ್ರವಾರ ಒಂದು ವರ್ಷದ ಸಂಭ್ರಮ. ಈ ಸಂಭ್ರಮದ ದಿನದಂದೆ ವಾಹಿನಿಯ ಆಪ್ ಬಿಡುಗಡೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮೀಡಿಯಂ ೨೪*೭ ವಾಹಿನಿಯ ಪ್ರಧಾನ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಮೀಡಿಯಂ ಸುದ್ಧಿ ವಾಹಿನಿಯು ೧ ವರ್ಷ ಪೂರೈಸಿದೆ. ನಾನಾ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಜನಮನದ ವಾಹಿನಿಯಾಗಿ ಬೆಳೆಯುತ್ತಿದೆ. ಇದೀಗ ನಮ್ಮ ವಾಹಿನಿಯು ಒಂದು ವರ್ಷದ ಸಂಭ್ರದಲ್ಲಿದೆ.

ಇದ್ರ ಜೊತೆಗೆ ಕನ್ನಡ ಮೀಡಿಯಂ ೨೪*೭ ಆಪ್ ಬಿಡುಗಡೆ ಕಾರ್ಯಕ್ರಮ ಕೂಡ ಶುಕ್ರವಾರ ನಡೆಯಲಿದ್ದು ಸಂಸದ ಬಿ.ವೈ.ರಾಘವೇಂದ್ರ ಆಪ್ ಬಿಡುಗಡೆ ಮಾಡಲಿದ್ದಾರೆ. ಶೀಘ್ರದಲ್ಲಿಯೇ ತುಳು ಭಾಷೆಯಲ್ಲಿ ಸುದ್ಧಿಯನ್ನು ನೀಡಲು ತುಳು ಟೈಮ್ಸ್ ಕೂಡ ಆರಂಭವಾಗಲಿದೆ. ವಾಹಿನಿಯ ಇಲ್ಲಿಯವರೆಗಿನ ಯಶಸ್ಸಿಗೆ ಸಹಕರಿಸಿದ ಜಾಹೀರಾತುದಾರರು, ಕೇಬಲ್ ಆರಪರೇಟರ್ ಹಾಗೂ ಎಲ್ಲರಗೂ ಧನ್ಯವಾದ ತಿಳಿಸಿದ್ದಾರೆ.