ಶಿವಮೊಗ್ಗ : ನಾವು ಪಕ್ಕಾ ಲೋಕಲ್.. ಇದ್ರಲ್ಲಿ ಡೌಟೇ ಇಲ್ಲ.. ಸ್ಥಳೀಯ ಸುದ್ದಿಗಳಿಗೆ ಮೊದಲ ಆದ್ಯತೆ.. ಜನರ ಸಮಸ್ಯೆಯನ್ನ ಜನಪ್ರತಿನಿಧಿಗಳ ಮುಂದಿಡೋದೇ ನಮ್ಮ ಗುರಿ... ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು.. ಜನರ ಧ್ವನಿಯಾಗಿ ನಿಲ್ಲಬೇಕು ಅನ್ನೋ ಕಾರಣಕ್ಕೆ ಹುಟ್ಟಿಕೊಂಡಿದ್ದೇ ಕನ್ನಡ ಮೀಡಿಯಂ ನ್ಯೂಸ್. ಆಗಸ್ಟ್ ೧೪ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ತು ಅನ್ನೋದು ಎಲ್ರಿಗೂ ಗೊತ್ತು. ಅಂದ್ಹಾಗೆ ನಮ್ಮ ವಾಹಿನಿಯ ಪುಟ್ಟ ಹೆಜ್ಜೆ ಅಲ್ಲಿಂದಲೇ ಆರಂಭವಾಯ್ತು. ಅಂದ್ರೆ ಆಗಸ್ಟ್ ೧೪, ೨೦೧೮ರ ಮಧ್ಯರಾತ್ರಿ ೧೨ ಗಂಟೆಗೆ ಕನ್ನಡ ಮೀಡಿಯಂ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್ ಪ್ರಾರಂಭವಾಯ್ತು. ಅಕ್ಟೋಬರ್‌ನಲ್ಲಿ ಕನ್ನಡ ಮೀಡಿಯಂ ಲೋಗೋವನ್ನ ಬಿಡುಗಡೆ ಮಾಡಿದ್ದು ಖ್ಯಾತ ಚಲನಚಿತ್ರ ನಟ ಅಚ್ಯುತ್ ಕುಮಾರ್.
ಕನ್ನಡ ಎಂದರೆ ಬರೀ ಭಾಷೆ ಅಲ್ಲ. ಅದು ಜೀವನ. ಸಮೃದ್ಧ ಸಂಸ್ಕೃತಿಯ ಆಗರ. ಜೊತೆಗೆ ಬದುಕಿನ ಎಲ್ಲ ನೋವು-ನಲಿವುಗಳ ಸಾಕ್ಷಿಯೂ ಹೌದು. ಈ ಕನ್ನಡ ನೆಲದ ನಿಜ ಪ್ರತಿನಿಧಿಯಾಗಿ ಕನ್ನಡ ಮೀಡಿಯಂ ಜಾಲತಾಣ ರೂಪಿಸುವ ಗುರಿ ನಮ್ಮದಾಗಿತ್ತು. ಪತ್ರಿಕೋದ್ಯದಲ್ಲಿ ಅಪಾರ ಅನುಭವ ಹೊಂದಿರುವ ಹೊನ್ನಾಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಈ ಸುದ್ದಿ ಸಂಸ್ಥೆಗೆ ಹುಟ್ಟು ಸಿಗ್ತು. ಯೂ ಟ್ಯೂಬ್ ಮೂಲಕವೇ ಹಲವಾರು ವಿಭಿನ್ನ ಕಾರ್ಯಕ್ರಮಗಳಿಗೆ ನಾಂದಿ ಹಾಡಿದವು. ಅದ್ರಲ್ಲಿ ಎಲ್ಲರಿಗಾಗಿ ಕಾನೂನು ಅನ್ನೋ ವೀಡಿಯೋ ಅಂಕಣ ಕರ್ನಾಟಕದ ಮಂದಿಗೆ ಬಹಳ ಇಷ್ಟವಾಗಿದೆ. ಇಂದಿಗೂ ಲಕ್ಷಾಂತರ ಜನ ವೀಕ್ಷಕರನ್ನು ಹೊಂದಿರೋದು ನಮ್ಮ ಹೆಮ್ಮೆ ಅಂತಲೇ ಹೇಳಬಹುದು. ಜನಗಣಮನ, ದೀಪಾವಳಿ ಡಿಜಿಟಲ್ ವಿಶೇಷಾಂಕ, ಹೆಣ್ಣು ಧನಿ, ಮುಕ್ತಮಾತು, ಫೋಟೋ ಕಥೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಪ್ರಸಾರವಾದವು.
ಜುಲೈ ೧, ೨೦೨೧. ಪತ್ರಿಕಾ ದಿನಾಚರಣೆಯ ದಿನವೇ ಇಷ್ಟು ದಿನ ಯೂಟ್ಯೂಬ್ ಚಾನೆಲ್ ಆಗಿ ಗುರುತಿಸಿಕೊಂಡಿದ್ದ ಕನ್ನಡ ಮೀಡಿಯಂ ನ್ಯೂಸ್ ವಾಹಿನಿ.. ಕನ್ನಡ ಮೀಡಿಯಂ ೨೪*೭ ಸುದ್ದಿ ವಾಹಿನಿ ಅನ್ನೋ ರೂಪವನ್ನು ಪಡೆಯಿತು. ಮೈಸೂರು, ಮಂಗಳೂರಿನಂತೆ ಸ್ಟೇಟ್ ಚಾನೆಲ್‌ಗಳಿಗೂ ನಾವೇನು ಕಮ್ಮಿ ಇಲ್ಲ ಅನ್ನೋ ಹಾಗೆ ಒಂದು ಸುದ್ದಿ ವಾಹಿನಿ ಹುಟ್ಟಕೊಳ್ತು. ಮಾಧ್ಯಮ ಲೋಕದಲ್ಲಿ ಪುಟ್ಟಪುಟ್ಟ ಹೆಜ್ಜೆಗಳನ್ನ ಇಟ್ಟು, ಸಾಕಷ್ಟು ಏಳುಬೀಳುಗಳನ್ನು ಕಂಡು ಈಗ ವರುಷ ಪೂರೈಸಿದ ಹರುಷ ನಮ್ಮ ಮೊಗದಲ್ಲಿ ಇದೆ.
ಬೆಳಗ್ಗೆಯಿಂದ ಸಂಜೆಯ ವರೆಗೆ ಮನರಂಜನೆಯ ಜೊತೆಗೆ ಸುದ್ದಿಗಳನ್ನು ಬಿತ್ತರಿಸೋದು ನಮ್ಮ ಉದ್ದೇಶ.. ನ್ಯೂಸ್ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿಕೊಂಡು ಬಂದಿದೆ. ಕನ್ನಡ ಮೀಡಿಯಂ ಸ್ಪೆಷಲ್, ಕನ್ನಡ ನಾಡಿ ಅನ್ನೋ ವಿಶೇಷ ಕಾರ್ಯಕ್ರಮಗಳು ಜೊತೆಗೆ ಪ್ರಜಾಮತ ಅನ್ನೋ ಕಾರ್ಯಕ್ರಮ ಬಿತ್ತರವಾಗುತ್ತಿದೆ. ಪ್ರಚಲಿತ ವಿದ್ಯಮಾನಗಳನ್ನು ಇಟ್ಟುಕೊಂಡು ಚರ್ಚೆ ನಡೆಸುವ ಕಾರ್ಯಕ್ರಮ ಇದಾಗಿದೆ. ಇಷ್ಟೇ ಅಲ್ಲ ಹಾಡು ಹಳೆಯದಾದರೇನು.. ಭಾವ ನವಿನ ಅನ್ನೋ ಕಾರ್ಯಕ್ರಮ, ಗಾಂಧಿ ಕಥನ, ಮಾತುಕತೆ, ಸಿನಿಯಾನ ಕರುಣಾಳು ಬಾ ಬೆಳಕೆ, ನೋ ಮೋರ್ ಇಂಗ್ಲಿಷ್, ಕನ್ನಡ ಸೀಮಿಯೊಳ್, ಗೀತ ಸಂಗೀತ, ಹಾಯ್ ಶಿವಮೊಗ್ಗ ಏನ್ ಸಮಾಚಾರ ಜೊತೆ ಇನ್ನು ಹಲವು ವಿಶೇಷ ವೀಡಿಯೋ ಅಂಕಣಗಳನ್ನು ಅನ್ನೋ ಕಾರ್ಯಕ್ರಮಗಳನ್ನು ಬಿತ್ತರಿಸುತ್ತ ಬಂದಿದೆ.
ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದೆ. ಬರೀ ಟಿವಿಯಲ್ಲಿ ಮಾತ್ರವಲ್ಲ ಸೋಶಿಯಲ್ ಮೀಡಿಯದಲ್ಲೂ ತಮ್ಮದೇ ಆದ ಚಾಪನ್ನು ಮೂಡಿಸಿದೆ ಕನ್ನಡ ಮೀಡಿಯಂ. ಫೇಸ್‌ಬುಕ್‌ನಲ್ಲಿ ಫಾಲೋವರ್ಸ್ ಸಂಖ್ಯೆ ಹತ್ತು ಸಾವಿರದ ಆಸುಪಾಸಿನಲ್ಲಿ ಇದೆ. ಯೂ ಟ್ಯೂಬ್‌ನಲ್ಲಿ ೫೦ ಸಾವಿರ ಸಬ್‌ಸ್ಕ್ರೈಬರ್ ಹೊಂದಿರುವ ಹೆಗ್ಗಳಿಕೆ ನಮ್ಮದು. ಪ್ರತಿ ತಿಂಗಳು ಸಹ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. ನಿಮ್ಮ ಪ್ರೀತಿ.. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ...
ಈಗೇನಿದ್ರೂ ಆನ್‌ಲೈನ್ ಜಮಾನ.. ಬೆರಳ ತುದಿಯಲ್ಲಿಯೇ ಜಗತ್ತನ್ನು ನೋಡಬಹುದು. ಮೊಬೈಲ್ ಇದ್ರೆ ಸಾಕು ಜಗತ್ತಿನ ಆಗು ಹೋಗುಗಳನ್ನು ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು. ಅದೇ ಕಾರಣಕ್ಕೆ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ವೀಕ್ಷಕರಿಗೆ ಹತ್ತಿರವಾಗಲು ಕನ್ನಡ ಮೀಡಿಯಂ ೨೪*೭ ಆಪ್ ಆರಂಭಿಸಿದ್ದೇವೆ. ಇನ್ಮುಂದೆ ಕುಳಿತಲ್ಲೇ ಕನ್ನಡ ಮೀಡಿಯಂ ೨೪*೭ ವಾಹಿನಿಯನ್ನು ವೀಕ್ಷಣೆ ಮಾಡಬಹುದು. ನಿಮ್ಮ ಮೊಬೈಲ್‌ನಲ್ಲಿ ಪ್ಲೇ ಸ್ಟೋರ್‌ಗೆ ಹೋಗಿ ಕನ್ನಡ ಮೀಡಿಯಂ ೨೪*೭ ಅಂತ ಟೈಪ್ ಮಾಡಿದ್ರೆ ಆಪ್ ಡೌನ್‌ಲೋಡ್ ಮಾಡಬಹುದು. ರಾಜ್ಯ, ಜಿಲ್ಲೆ, ರಾಷ್ಟ್ರದ ಸುದ್ದಿಗಳನ್ನು ನಿಮ್ಮ ಮೊಬೈಲ್‌ನಲ್ಲೇ ವೀಕ್ಷಣೆ ಮಾಡಬಹುದು.
ಇನ್ನು ಹತ್ತು ಹಲವು ಹೊಸ ಕಾರ್ಯಕ್ರಮಗಳ ಮೂಲಕ ನಿಮ್ಮ ಮನೆ ಮನ ತಲುಪೋದು ನಮ್ಮ ಗುರಿ. ಈ ಒಂದು ವರ್ಷದ ಏಳಿಗೆಯಲ್ಲಿ ಕೈ ಜೋಡಿಸಿದವರು ಹಲವರು.. ಅವರೆಲ್ಲರಿಗೂ ಕೃತಜ್ಞತೆಯನ್ನು ನಾವು ಸಲ್ಲಿಸುತ್ತೇವೆ. ಈಗ ಒಂದು ಹೆಜ್ಜೆ ಇಟ್ಟಿದ್ದೇವೆ ಅಷ್ಟೇ.. ಮುಂದೆ ದೊಡ್ಡ ದೊಡ್ಡ ಸವಾಲುಗಳೇ ನಮ್ಮ ಮುಂದೆ ಇವೆ.
ಮಲೆನಾಡಿನ ಜನರ ಧ್ವನಿಯಾಗಿ, ನೊಂದವರ ನುಡಿಯಾಗಿ... ಜನಮನದ ಸಂಗಾತಿಯಾಗಿ ನಾವು ನಿಮ್ಮ ಜೊತೆಗೆ ಸದಾ ಇರುತ್ತೇವೆ. ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗುತ್ತೇವೆ. ನಿಮ್ಮ ಆಶೀರ್ವಾದ ಸದಾ ಹೀಗೇ ಇರಲಿ.. ನಿಮಗೆ ಇಷ್ಟವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಜವಾಬ್ದಾರಿ ಟೀಂ ಕನ್ನಡ ಮೀಡಿಯಂ ಮೇಲೆ ಇದೆ.
ಸದಾ ನಿಮ್ಮೊಂದಿಗೆ ಟೀಂ ಕನ್ನಡ ಮೀಡಿಯಂ ೨೪*೭... ಸಂಭವಿಸು ಸಮಸ್ತರ ನಡುವೆ