ಕುಂಟುತ್ತಲೇ ಸಾಗಿದೆ ಸೋಮಿನಕೊಪ್ಪ ಮೇಲ್ಸೇತುವೆ ಕಾಮಗಾರಿ
ನಿತ್ಯ ರೇಲ್ವೆ ಗೇಟ್ ದಾಟಲು ಜನರ ಹರಸಾಹಸ
ವಿದ್ಯಾರ್ಥಿಗಳು, ನೌಕರರಿಗೆ ನಿತ್ಯ ನರಕಯಾತನೆ
೨೦೨೨ರಲ್ಲಿ ಆರಂಭವಾಗಿರುವ ಕಾಮಗಾರಿ
ನಿತ್ಯ ಜನರು ಪರದಾಡುವಂತಾಗಿದೆ
ರೇಲುಗಳು ಹೋದಾಗ ಗೇಟ್ ಹಾಕುವುದರಿಂದ ವಾಹನ ದಟ್ಟಣೆ
ಶಿವಮೊಗ್ಗ :
ಎರಡು ವರ್ಷಗಳಿಂದ ಮೇಲ್ಸೇತುವೆ ಕಾಮಗಾರಿ ನಡೀತಾನೆ ಇದೆ. ನಿತ್ಯ ಒಂದು ಟ್ರೇನ್ ಬಂದ್ರೆ ಸಾಕು, ವಾಹನ ದಟ್ಟನೆ ಆಗುತ್ತೆ. ಹೇಗಪ್ಪ ರೇಲ್ವೆ ಗೇಟ್ ದಾಟೋದು ಅನ್ನೋ ಸಮಸ್ಯೆ ಉದ್ಭವಿಸುತ್ತದೆ. ನಿತ್ಯ ಏನಿಲ್ಲವೆಂದು ಐದಾರು ಟ್ರೇನ್‌ಗಳು ಸಂಚರಿಸುತ್ತವೆ. ಅದರಲ್ಲೂ ಬೆಳಗ್ಗೆ ಮಕ್ಕಳು ಸ್ಕೂಲಿಗೆ ಹೋಗೋ ಟೈಮ್‌ನಲ್ಲಿ, ಜನರು ಕೆಲಸಕ್ಕೆ ಹೋಗೋ ಟೈಮ್‌ನಲ್ಲಿ ಸಂಚರಿಸುತ್ತವೆ. ಇಂತಹ ಸಂದರ್ಭದಲ್ಲಿ ವಾಹನ ದಟ್ಟನೆ ಉಂಟಾಗುತ್ತಲೇ ಇದೆ. ಜನರು ಈ ಹಿಂದೆ ಪ್ರತಿಭಟನೆ ಮಾಡಿದ್ರೂ ಸಹ ಇದುವರೆಗೂ ಕಾಮಗಾರಿ ಕಂಪ್ಲೀಟ್ ಆಗಿಲ್ಲ. ಪರ್ಯಾಯ ಮಾರ್ಗವೂ ಇಲ್ಲದೆ ನಿತ್ಯ ಜನರು ಪರದಾಡುತ್ತಿದ್ದಾರೆ.