ಬೆಂಗಳೂರು: ವಿಧಾನಸಭಾ ಅಧಿವೇಶದ ಕೊನೆಯ ದಿನವಾದ ಇಂದು ವಿಪಕ್ಷದವರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಜನರಿಗೆ ಅನುಕೂಲವಾಗುವಂತಹ ಯೋಜನೆಗಳ ಚರ್ಚೆ ನಡೆಯಬೇಕು ಎಂದು ಕಾಂಗ್ರೆಸ್ ಶಾಸಕರು ಶೂನ್ಯ ವೇಳೆಯಲ್ಲಿ ಪಟ್ಟು ಹಿಡಿದರು. ೨ಎ ಮೀಸಲಾತಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತರ ಕೊಡುತ್ತಿರುವ ಸಂದರ್ಭದಲ್ಲಿ ಬೆಲೆ ಏರಿಕೆ, ಹೊಸ ಶಿಕ್ಷಣ ನೀತಿ ಸೇರಿದಂತೆ ಇತರ ವಿಷ್ಯಗಳ ಚರ್ಚೆ ನಡೆಯಬೇಕು. ಅಲ್ಲದೆ ವಿಧಾನಸಭಾ ಅಧಿವೇಶನದ ಅವಧಿಯನ್ನು ಇನ್ನೂ ೧೫ ದಿನ ವಿಸ್ತರಣೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ರು. ಈ ಸಂದರ್ಭದಲ್ಲಿ ಸದನದ ಬಾವಿಗೆ ಇಳಿದು ಕಾಂಗ್ರೆಸ್ ಶಾಸಕರು ಘೋಷಣೆ ಕೂಗಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಸೇರಿದಂತೆ ಇತರ ನಾಯಕರು ಸದನದ ಬಾವಿಗಿಳಿದು ಸರಕಾರದ ವಿರುದ್ಧ ಘೋಷಣೆ ಹಾಕಿದ್ರು. ಇಟಲಿ, ನಾಗ್ಪುರ ಎಜ್ಯೂಕೇಷನ್ ಪಾಲಿಸಿ ನಮಗೆ ಬೇಡ.. ಸರಕಾರಕ್ಕೆ ಧಿಕ್ಕಾರ ಎಂದು ಹೊಸ ಶಿಕ್ಷಣ ನೀತಿಗೆ ವಿರೋಧ ವ್ಯಕ್ತಪಡಿಸಿದ್ರು. ಕೊನೆಗೂ ಅಧಿವೇಶನ ಇಂದಿಗೆ ಮುಕ್ತಾಯಗೊಂಡಿತು.