ಸಂಸದೆ ಪ್ರಜ್ಞಾ ಠಾಕೂರ್ ವಿರುದ್ಧ ದೂರು 

ಹೈಲೆಟ್ಸ್:

ಸಂಸದೆ ಪ್ರಜ್ಞಾ ಠಾಕೂರ್ ವಿರುದ್ಧ ದೂರು 

ಪ್ರಚೋಧನಕಾರಿ ಹೇಳಿಕೆ ನೀಡಿದ ಆರೋಪ 

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಿಂದ ದೂರು 

ಕೋಟೆ ಪೊಲೀಸರಿಗೆ ಹೆಚ್.ಎಸ್. ಸುಂದರೇಶ್ ದೂರು 

ಶಿವಮೊಗ್ಗ:


ಸಂಸದೆ ಪ್ರಜ್ಞಾ ಠಾಕೂರ್ ಪ್ರಚೋಧನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಕಾಂಗ್ರೆಸ್ ಪರವಾಗಿ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಿಂದೂ ಜಾಗರಣ ವೇದಿಕೆಯಿಂದ ನಗರದಲ್ಲಿ ಇತ್ತೀಚಿಗೆ ನಡೆದ ಕರ್ನಾಟಕ ದಕ್ಷಿಣ ಪ್ರಾಂತ ತ್ರೈಮಾಸಿಕ ಸಮ್ಮೇಳನದಲ್ಲಿ ಪ್ರಜ್ಞಾ ಸಿಂಗ್ ದಿಕ್ಸೂಚಿ ಭಾಷಣ ಮಾಡಿದ್ದರು. ಆಯುಧಗಳನ್ನು ಇಟ್ಟುಕೊಳ್ಳುವ ಬಗ್ಗೆ ಹಾಗೂ ಜನರನ್ನು ಹಿಂಸೆಯ ಕಡೆ ಪ್ರಚೋಧಿಸುವ ರೀತಿ ಹಾಗೂ ಧರ್ಮಗಳ ಮಧ್ಯೆ ದ್ವೇಷ ಹುಟ್ಟು ರೀತಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನವರು ದೂರು ನೀಡದ್ದಾರೆ. ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ಪ್ರಚೋಧನಾಕಾರಿ ಹೇಳಿಕೆಗಳ ಬಗ್ಗೆ ಸಾಕೇತ್ ಗೋಕಲೆ ಮತ್ತು ತೆಹ್‌ಸೀನ್ ಪೂನಾವಾಲಾ ಜಿಲ್ಲಾರಕ್ಷಣಾಧಿಕಾರಿಗೆ ಆನ್‌ಲೈನ್ ಮೂಲಕ ಈಗಾಗಲೇ ದೂರು ನೀಡಿದ್ದಾರೆ. ಆದರೆ ಜಿಲ್ಲಾ ರಕ್ಷಣಾಧಿಕಾರಿಯವರು ಖುದ್ದಾಗಿ ಹಾಜರಾದರೆ ಎಫ್‌ಐಆರ್ ದಾಖಲಿಸುವುದಾಗಿ ಅವರಿಗೆ ತಿಳಿಸಿದ್ದರು. ಆದ್ದರಿಂದ ಅವರ ಪರವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕೋಟೆ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲು ಮಾಡುವ ಸಾಧ್ಯತೆಗಳು ಇವೆ.