ಬೆಂಗಳೂರು : ಅಗ್ನಿಪಥ್ ವಿರೋಧಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ರಾಜಭವನ ಚಲೋ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಂತರ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ರೇಸ್ ಕೋರ್ಸ್ ರಸ್ತೆಯ ಬಳಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಇದಕ್ಕು ಮುನ್ನ ವೇಳೆ ಮಾತನಾಡಿದ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಸಿ.ಟಿ.ರವಿ ವಿರುದ್ಧ ಏಕ ವಚನದಲ್ಲಿ ಹರಿಹಾಯ್ದಿದ್ದಾರೆ. ಓಟಿ ರವಿಗೆ ಹೇಳ್ತೇನೆ. ಎರಡು ಬಾರಿ ಆಕ್ಸಿಡೆಂಟ್ ಮಾಡಿ ಓಡಿ ಹೋದವನು ನೀನು. ಮೂರು ಜೀವಗಳನ್ನ ಬಲಿಪಡೆದವನು. ನೀನು ಗಾಂಧಿ ಕುಟುಂಬದ ಬಗ್ಗೆ ಮಾತನಾಡ್ತೀಯ. ಜೀವ ತೆಗೆದವನಿಂದ ನಾವು ಕಲಿಯಬೇಕಾದ್ದು ಏನೂ ಇಲ್ಲ. ಗಾಂಧಿ ಪರಿವಾರದ ಬಗ್ಗೆ ಅಂಥ ಹೇಳಿಕೆ ಕೊಡಬೇಡಿ. ಕೊಟ್ಟರೆ ಅದಕ್ಕೆ ತಕ್ಕ ಉತ್ತರ ಯೂತ್ ಕಾಂಗ್ರೆಸ್ ಕೊಡುತ್ತದೆ. ನೀವು ಓಟಿ ರವಿ ಆಗೋದನ್ನ ಬಿಡಿ ಎಂದು ಕಿಡಿ ಕಾರಿದರು.