ಶಿವಮೊಗ್ಗ : ಯಕ್ಷ ಸಂವರ್ಧನಾ ಸಮಿತಿಯಿಂದ ಯಕ್ಷಗಾನ ತರಬೇತಿ ಆಯೋಜನೆ ಮಾಡಲಾಗಿದ್ದು ಇದರ ಉದ್ಘಾಟನೆ ಜೂನ್ 12 ರಂದು ನಡೆಯಲಿದೆ. ಕಲ್ಲಹಳ್ಳಿಯ ಅಭೀಷ್ಠವರ ಗಣಪತಿ ದೇವಸ್ಥಾನದಲ್ಲಿ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಹೆಚ್.ಎಂ.ಆನಂದ ಶೆಟ್ಟಿ ತಿಳಿಸದರು.
ಈ ಕುರಿತು ಮಾಧ್ಯಮಗೋಷ್ಠೀ ನಡೆಸಿ ಮಾತನಾಡಿದ ಅವರು, ಕಳೆದ 27 ವರ್ಷಗಳಿಂದ ಸಮಿತಿಯು ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಬಾರಿಯ ಕಲಿಕಾ ಶಿಬಿರದಲ್ಲಿ ಶನಿವಾರ ಮತ್ತು ಭಾನುವಾರ ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ಯಕ್ಷಗಾನ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.