ಹರ್ಷ ಮನೆಗೆ ಬಿಎಸ್‌ವೈ ಭೇಟಿ

ಶಿವಮೊಗ್ಗ : ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ಎಲ್ಲರೂ ಒಟ್ಟಾಗಿ ಬಾಳಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಸೇರಿ ಒಟ್ಟಾಗಿ ಬಾಳಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಹರ್ಷ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಿಎಸ್‌ವೈ, ರಾಜ್ಯ ಸರ್ಕಾರದ ವತಿಯಿಂದ ಹರ್ಷ ಕುಟುಂಬಕ್ಕೆ ಘೋಷಣೆಯಾಗಿದ್ದ 25 ಲಕ್ಷ ರೂಪಾಯಿಯ ಚೆಕ್ ನೀಡಿ ಹರ್ಷನ ಸಾವಿಗೆ ಸಂತಾಪ ಸೂಚಿಸಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹರ್ಷ ಹಿಂದೂ ಮುಖಂಡನಾಗಿ ಬೆಳೆಯುತ್ತಿದ್ದ. ಆತನ ಬೆಳವಣಿಗೆಯನ್ನು ಸಹಿಸಲಾಗದೆ ಕೊಲೆ ಮಾಡಲಾಗಿದೆ. ಇಂತಹ ದುರ್ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಹಾಗೂ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಜೀವಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿಯ ಹಲವು ಮುಖಂಡರು ಯಡಿಯೂರಪ್ಪಗೆ ಸಾಥ್ ನೀಡಿದರು.