ಪ್ರಶ್ನೆ ಪತ್ರಿಕೆಯಲ್ಲಿ ತಪ್ಪು ಪ್ರಶ್ನೆಗಳು?! 

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ನಡೆಸಿದ ಸಹಾಯಕ ಪ್ರಧ್ಯಾಪಕ ಹುದ್ದೆಯಲ್ಲಿನ ಪ್ರಶ್ನೆ ಪತ್ರಿಕೆಯಲ್ಲಿ ಸಾಕಷ್ಟು ತಪ್ಪುಗಳಿದ್ದು, ಈ ವಿಚಾರ ಇದೀಗ ತೀರ್ವ ಚರ್ಚೆಗೆ ಕಾರಣವಾಗಿದೆ.

ಸಾಹಿತಿಗಳು ಹಾಗೂ ಅವರು ಬರೆದ ಕೃತಿಗಳ ಹೊಂದಿಸಿ ಬರೆಯಿರಿ ಪ್ರಶ್ನೆಯಲ್ಲಿ ವಿಮರ್ಶೆಯ ನರಿಭಾಷೆ ಎಂಬ ಪುಸ್ತಕದ ಹೆಸರಿದೆ. ಆದರೆ ವಾಸ್ತವವಾಗಿ ಈ ಹೆಸರಿನಲ್ಲಿ ಯಾವುದೇ ಪುಸ್ತಕವಿಲ್ಲ. ಬದಲಾಗಿ ವಿಮರ್ಷೆಯ ಪರಿಭಾಷೆ ಎಂಬ ಪುಸ್ತಕವಿದೆ. ಇದೇ ರೀತಿಯಾಗಿ ಕವಿಗಳು ಹಾಗೂ ಅವರಿಗೆ ಸಂಬಂಧಿಸಿದ ವಾಕ್ಯಗಳ ಹೊಂದಿಸಿ ಬರೆಯಿರಿ ಪ್ರಶ್ನೆಯಲ್ಲಿ ಕೆ.ಎಸ್.ನರಸಿಂಹಮೂರ್ತಿ ಅವರ ಹೆಸರನ್ನು ತಪ್ಪಾಗಿ ಕೆ.ಎಸ್.ನರಸಿಂಹವರ್ಮ ಎಂದು ನೀಡಲಾಗಿದೆ. ಇವು ಉದಾಹರಣೆಗಳಷ್ಟೆ, ಈ ರೀತಿಯಾಗಿ ಪ್ರಶ್ನೆಪತ್ರಿಕೆಯಲ್ಲಿ ಸಾಕಷ್ಟು ತಪ್ಪುಗಳಿದ್ದು ಪರಿಕ್ಷಾರ್ತಿಗಳು ತೀವ್ರ ಗೊಂದಲಕೀಡಾಗಿದ್ದಾರೆ.