ಸರ್ಜಿ ಆಸ್ಪತ್ರೆಯಲ್ಲಿ ೪ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಶಿವಮೊಗ್ಗ : ಇಲ್ಲಿನ ಸರ್ಜಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ವಿಶೇಷವಾಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಭದ್ರಾವತಿ ತಾಲೂಕಿನ ತಡಸಾ ಗ್ರಾಮದ ಅಲ್ಮಾಜ್ ಬಾನು ಎಂಬ ಮಹಿಳೆಯೇ ಆ ಮಹಾತಾಯಿ. ಆರೀಫ್ ಎಂಬುವವರ ಪತ್ನಿಯಾಗಿರುವ ೨೨ ವರ್ಷದ ಅಲ್ಮಾಜ್ ಬಾನು ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಬೆಳಗ್ಗೆ 7.30 ಕ್ಕೆ ಹೆರಿಗೆಯಾಗಿದ್ದು, ಮಕ್ಕಳು ಹಾಗೂ ತಾಯಿಯು ಆರೋಗ್ಯವಾಗಿದ್ದಾರೆ. ಅಂದ್ಹಾಗೆ ವೈದ್ಯಕೀಯ ಕ್ಷೇತ್ರದ ಪ್ರಕಾರ, ನಾಲ್ಕು ಮಕ್ಕಳಿಗೆ ಜನ್ಮ ನೀಡುವ ಪ್ರಕರಣಗಳು ತುಂಬಾ ವಿರಳ. ೫ ಲಕ್ಷ ಜನರಲ್ಲಿ ಒಬ್ಬರು ಮಾತ್ರ ಈ ರೀತಿಯಾಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡುವುದು ಕಂಡು ಬರುತ್ತೆ