ದೆಹಲಿ : ವಾಟ್ಸಪ್ ಗ್ರೂಪ್‌ಗಳಲ್ಲಿ ಅನವಶ್ಯಕವಾಗಿ ಹಲವರು ಮೆಸೇಜ್ ಮಾಡ್ತಾಯಿರ್‍ತಾರೆ. ಇದರಿಂದಾಗಿ ಗ್ರೂಪ್‌ನಲ್ಲಿರುವ ಬೇರೆಯವರಿಗೆ ಕಿರಿಕಿರಿ ಉಂಟಾಗುತ್ತಿರುತ್ತದೆ. ಇದನ್ನ ತಪ್ಪಿಸಲು ವ್ಯಾಟ್ಸ್‌ಪ್ ಗ್ರೂಪ್ ಅಡ್ಮಿನ್‌ಗಳಿಗೆ, ಹೊಸ ಫೀಚರ್ ಒಂದನ್ನ ವಾಟ್ಸಪ್ ಸಂಸ್ಥೆ ಬಿಡುಗಡೆ ಮಾಡಲಿದೆ.
ಈ ಫೀಚರ್‌ನಲ್ಲಿ, ಗ್ರೂಪ್‌ಗೆ ಬರುವ ಸಂದೇಶಗಳನ್ನ ಯಾರಿಗೂ ಕಾಣದ ಹಾಗೆ ಡಿಲೀಟ್ ಮಾಡುವ ವಿಶೇಷ ಅಧಿಕಾರವನ್ನ ಗ್ರೂಪ್ ಅಡ್ಮಿನ್‌ಗಳಿಗೆ ನೀಡಲಿದೆ. ಶೀಘ್ರದಲ್ಲಿಯೇ ಈ ಫೀಚರ್ ಬಿಡುಗಡೆಯಾಗಲಿದೆ. ಹಾಗೆಯೇ, ಬಳಕೆದಾರರು ಯಾರಿಗಾದರು ಕಳುಹಿಸಿದ ಮೆಸೇಜ್‌ಅನ್ನು ಡಿಲೀಟ್ ಮಾಡುವ ಅವಧಿಯನ್ನ ಒಂದು ವಾರಕ್ಕೆ ವಿಸ್ತರಿಸಲು ವಾಟ್ಸಪ್ ಸಂಸ್ಥೆ ನಿರ್ಧರಿಸಿದೆ.