ಭಾರತ್ ಬಂದ್‌ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ 

ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವAತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್‌ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭಾರತ್ ಬಂದ್‌ಗೆ ಸುಮಾರು ೩೦ಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿದವು. ಆದರೆ ನಾಗರಿಕರು ಹಾಗೂ ಕೆಲ ವ್ಯಾಪಾರಸ್ಥರಿಂದ ಅಷ್ಟಾಗಿ ಬೆಂಬಲ ಸಿಗಲಿಲ್ಲ. ಭಾರತ್ ಬಂದ್‌ಗೆ ಸಹಕರಿಸುವಂತೆ ಕೋರಿ ರೈತ ಸಂಘಟನೆಗಳ ಮುಖಂಡರು ಅಂಗಡಿ, ಹೋಟೆಲ್ ಮಾಲೀಕರಿಗೆ ಕೈಮುಗಿದು ಕೇಳಿಕೊಂಡರು. ಆಟೋ ಚಾಲಕರಿಗೂ ಬೆಂಬಲ ನೀಡುವಂತೆ ಕೇಳಿಕೊಂಡ್ರು. ರೈತ ಮುಖಂಡ ಕೆ.ಟಿ.ಗಂಗಾಧರ್, ಜೆಡಿಎಸ್ ಮುಖಂಡ ಎಂ.ಶ್ರೀಕಾAತ್, ಕಾಂಗ್ರೆಸ್‌ನ ಎನ್.ರಮೇಶ್ ಸೇರಿದಂತೆ ಇತರ ಮುಖಂಡರು ವ್ಯಾಪಾರಸ್ಥರಲ್ಲಿ ವಿನಂತಿ ಮಾಡಿಕೊಂಡರು. ಶಿವಮೊಗ್ಗ ನಗರದ ಬಸ್ ನಿಲ್ದಾಣದ ಬಳಿ ಓಪನ್ ಆಗಿದ್ದ ಅಂಗಡಿಗಳಿಗೆ ತೆರಳಿ ಕೈಮುಗಿದು ಬಂದ್‌ಗೆ ಬೆಂಬಲ ನೀಡುವಂತೆ ಕೋರಿದರು.

ಬೆಳಗ್ಗೆಯಿಂದಲೇ ರೈತ ನಾಯಕರು, ಕನ್ನಡಪರ ಹೋರಾಟಗರಾರರು ಬೀದಿಗೆ ಇಳಿದಿದ್ದರು. ಶಿವಮೊಗ್ಗದಲ್ಲಿ ಎಪಿಎಂಸಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಸೇರಿದಂತೆ ಕೆಲ ಕಡೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ಸೂಚಿಸಲಾಯಿತು. ಮತ್ತೆ ಕೆಲ ಕಡೆ ಅಂಗಡಿಗಳು ಎಂದಿನAತೆ ಓಪನ್ ಆಗಿದ್ದವು. ಕನ್ನಡಪರ ಸಂಘಟನೆಗಳು ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದವು.

ಕರವೇ ಕಾರ್ಯಕರ್ತರು ಅಶೋಕ ವೃತ್ತದ ಬಳಿ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ರೈತ ವಿರೋಧಿ ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಮೊದಲಿನಿಂದಲೂ ಕೇಂದ್ರದ ಕಾಯಿದೆಗಳ ಬಗ್ಗೆ ರೈತರು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇದೇ ವೇಳೆ ಕೆಎಸ್‌ಆರ್‌ಟಿಸಿ ಬಸ್ ತಡೆಯಲು ಹೋದ ಕನ್ನಡ ಕಾರ್ಮಿಕ ವೇದಿಕೆಯ ಮಂಜು ಅವರನ್ನು ಪೊಲೀಸರು ತಡೆದರು. ಪರಿಣಾಮ ಬಸ್ ನಿಲ್ದಾಣದ ಎದುರು ಉರುಳು ಸೇವೆ ನಡೆಸಿದರು.

ನಗರದ ಕೆಲವೆಡೆ ಭಾರತ್ ಬಂದ್‌ಗೆ ಸಹಕಾರ ನೀಡುವಂತೆ ಕೋರಿದ ರೈತ ಸಂಘಟನೆ ಹಾಗೂ ಇತರೆ ಸಂಘಟನೆಗಳ ಮುಖಂಡರು, ಬಳಿಕ ನಗರದ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಿವಪ್ಪನಾಯಕ ವೃತ್ತದ ಮೂಲಕ ಮೆರವಣಿಗೆ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡಿತು. ಪ್ರತಿಭಟನಾ ಮೆರವಣಿಗೆ ಉದ್ದಕ್ಕೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೂಡಲೇ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ರು.