ಸಾಂಕ್ರಾಮಿಕ ರೋಗಗಳು ಸಾಕಷ್ಟು ಪಾಠ ಕಲಿಸಿವೆ: ಕುಮಾರ್ ಬಂಗಾರಪ್ಪ 

ಬೆಂಗಳೂರು : ಸಾಂಕ್ರಾಮಿಕ ರೋಗಗಳು ನಮ್ಮಲ್ಲಿ ಸಾಕಷ್ಟು ಬದಲಾವಣೆಗಳನ್ನ ತಂದಿವೆ. ಇವುಗಳಿಂದಲೇ ಆಸ್ಪತ್ರೆಗಳ ಮೂಲ ಸೌಕರ್ಯದ ಕುರಿತಾಗಿ ಚರ್ಚೆ ನಡೆಸುವಂತೆ ಮಾಡಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿನ ಆಂಬುಲೆನ್ಸ್ ಹಾಗೂ ವೈದ್ಯಕೀಯ ಸಮಸ್ಯೆಗಳ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಆಂಬುಲೆನ್ಸ್ ಸೇವೆ ಒದಗಿಸುವ ವ್ಯವಸ್ಥೆಯಲ್ಲಿ ಸರಿಯಾದ ಹೊಂದಾಣಿಕೆ ಮಾಡದ ಕಾರಣ ಈ ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸದೆ ಹಾಳಾಗಿವೆ. ಇದೇ ರೀತಿಯಾಗಿ ಅನೇಕ ಸಮಸ್ಯೆ ಆರೋಗ್ಯ ವ್ಯವಸ್ಥೆಯಲ್ಲಿದೆ. ಇಂತಹ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ನಮಗೆ ಸಾಕಷ್ಟು ಪಾಠಗಳನ್ನ ಕಲಿಸಿವೆ ಎಂದರು.