ಸಾಧ್ಯವಾದಷ್ಟು ಮರಗಳನ್ನ ಉಳಿಸಲಾಗುವುದು: ಹರತಾಳು ಹಾಲಪ್ಪ 

ಸಾಗರ : ಇಲ್ಲಿನ ಶಿವಮೊಗ್ಗ ರಸ್ತೆಯ ತ್ಯಾಗರ್ತಿ ವೃತ್ತದಿಂದ ಎಲ್.ಬಿ. ಕಾಲೇಜಿನವರೆಗೆ ಹೆದ್ದಾರಿ ವಿಸ್ತರಣೆ ಕಾಮಾಗಾರಿಗಾಗಿ ಮರಗಳನ್ನ ಕಡಿಯುವುದನ್ನ ವಿರೋಧಿಸಿ ಪರಿಸರವಾದಿಗಳು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ ಪರಿಸರವಾದಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಈ ಕಾಮಗಾರಿಯಿಂದಾಗಿ ೪೦೦ ಮರಗಳು ಹೋಗುತ್ತವೆ. ನಾನು ಒಬ್ಬ ಹಳ್ಳಿಯಿಂದ ಬಂದವನಾಗಿ, ಶಾಸಕನಾಗಿ ನನಗೂ ಇದು ಬೇಸರವಾಗುತ್ತದೆ. ಪರಿಸರವಾದಿಗಳು ಹಾಗೂ ಊರಿನ ಹಿರಿಯರು, ಈ ವಿಚಾರವಾಗಿ ಬೇರೆ ವ್ಯವಸ್ಥೆ ಇಲ್ಲವಾ ಎಂದು ನನ್ನನ್ನು ಪ್ರಶ್ನೆ ಮಾಡಿದರು ಹಾಗೂ ರಸ್ತೆ ತಡೆಯನ್ನ ಕೂಡ ಮಾಡಿದರು. ಹೀಗಾಗಿ ಈ ಸಭೆಯಲ್ಲಿ, ಸಾಧ್ಯವಾದಷ್ಟು ಮರಗಳನ್ನ ಉಳಿಸಿಬೇಕೆಂದು ತೀರ್ಮಾನಿಸಲಾಗಿದೆ. ಅದಕ್ಕೆ ಪರ್ಯಾಯ ಮಾರ್ಗಗಳನ್ನ ಅನುಸರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಭೆಯ ಕುರಿತಾಗಿ ಮಾಹಿತಿ ನೀಡಿದರು.