ಶಿವಮೊಗ್ಗ : ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿರುವ ಶಿವಮೊಗ್ಗದ ಜನತೆಗೆ ಮತ್ತೊಂದು ನೀರಿನ ಶಾಕ್ ಎದುರಾಗಿದೆ. ಇದು ಮಳೆ ನೀರಿನ ಶಾಕ್ ಅಲ್ಲ ಬದಲಾಗಿ ಕುಡಿಯುವ ನೀರಿನ ಶಾಕ್. ಹೌದು, ನಗರದ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಪಂಪ್ ಮುಳುಗಡೆಯಾಗಿದ್ದು, ಏರು ಕೊಳವೆಗಳ ಮಾರ್ಗವೂ ಸಹ ಮುಳುಗಡೆಯಾಗಿದೆ. ಆದ್ದರಿಂದ ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯವಾಗಲಿದೆ.
ಊರುಗಡೂರು, ಸೂಳೆಬೈಲು, ಸಹ್ಯಾದ್ರಿ ಕಾಲೇಜು, ಸಹ್ಯಾದ್ರಿ ನಗರ, ಪುರಲೆ, ಗುಡ್ಡೇಕಲ್, ನವುಲೆ, ಡಿ.ಡಿ.ಅರಸು, ಬಸವೇಶ್ವರ ನಗರ, ಬೊಮ್ಮನಕಟ್ಟೆ, ಶಾಂತಿ ನಗರ, ಆರ್ ಎಂ ಎಲ್ ನಗರ, ರವೀಂದ್ರ ನಗರ, ತುಂಗಾನಗರ, ಮಿಳಘಟ್ಟ ಪ್ರದೇಶದಲ್ಲಿ ಎರಡು ದಿನ ನೀರು ಸರಬರಾಜು ವ್ಯತ್ಯಯವಾಗಲಿದೆ ಎಂದು ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.