ಶಿವಮೊಗ್ಗ : ಇಲ್ಲಿನ 24/7 ನೀರಿನ ಯೋಜನೆಯಲ್ಲಿನ ಲೋಪ ಹಾಗೂ ವಾಟರ್ ಬಿಲ್ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಈ ಹಿನ್ನೆಲೆಯಲ್ಲಿ ರವೀಂದ್ರ ನಗರದಲ್ಲಿ ಶಿವಮೊಗ್ಗ ಜಲಮಂಡಳಿ ಹಾಗೂ ಮಹಾನಗರ ಪಾಲಿಕೆಯವರು ಸಭೆ ನಡೆಸಿದ್ದಾರೆ. ಈ ವೇಳೆ ಅಲ್ಲಿನ ನಿವಾಸಿಗಳು ಜಲಮಂಡಳಿ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರನ್ನ ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗಷ್ಟೆ ಶಿವಮೊಗ್ಗ ನಗರದ ಕೆಲ ಭಾಗಗಳಲ್ಲಿ ಅವೈಜ್ಞಾನಿಕವಾಗಿ ವಾಟರ್ ಬಿಲ್ ವಿತರಣೆ ಮಾಡಲಾಗಿತ್ತು. ಜಲಮಂಡಳಿಯವರು ನೀಡಿದ್ದ ಬಿಲ್ ಮೊತ್ತ ನೋಡಿ ಜನರು ಶಾಕ್ ಆಗಿದ್ದರು. ಅಲ್ಲದೆ ೨೪/೭ ಕುಡಿಯುವ ನೀರಿನ ಕಾಮಗಾರಿಯು ಕಳಪೆಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಸಮಸ್ಯೆಗಳ ಕುರಿತಾಗಿ ಹಲವು ಸಂಘ ಸಂಸ್ಥೆಗಳು ಸಭೆಗಳನ್ನ ನಡೆಸಿವೆ. ಈ ಕುರಿತಾಗಿ ಕನ್ನಡ ಮೀಡಿಯಂ ವಾಹಿನಿ ನಿರಂತರವಾಗಿ ಸುದ್ದಿ ಪ್ರಸಾರ ಮಾಡಿತ್ತು.
ಇದರ ಫಲಶೃತಿಯೆಂಬಂತೆ ಜನರ ಜೊತೆಗೆ, ಅವರ ಸಮಸ್ಯೆಗಳ ಕುರಿತಾಗಿ ಜಲಮಂಡಳಿ ಹಾಗೂ ಮಹಾನಗರ ಪಾಲಿಕೆ ಸಭೆ ನಡೆಸಿದೆ. ಸಭೆಯಲ್ಲಿ ಜನರು ತಮ್ಮ ಗೋಳು ತೋಡಿಕೊಂಡು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕ್ಲಾಸ್ ತೆಗೆದುಕೊಂಡರು. ಕೊನೆಗೆ ಜಲಮಂಡಳಿಯವರು, ಇನ್ನೊಂದು ತಿಂಗಳಲ್ಲಿ ಈ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಆದ್ರೆ ಇವರು ಮಾತಿಗೆ ತಕ್ಕಂತೆ ನಡೆದೊಕೊಳ್ತಾರಾ? ಅಥವಾ ಮಾತು ಮಾತಾಗಿಯೇ ಉಳಿದು ಹೊಗುತ್ತೋ ಕಾದು ನೋಡಬೇಕಿದೆ.