ಶಿವಮೊಗ್ಗ : ದಿನ 24 ಗಂಟೆ ಕುಡಿಯುವ ನೀರು ಮನೆಗೆ ಬರುತ್ತೆ ಅಂತ ಶಿವಮೊಗ್ಗ ನಗರ ಜನರು ಖುಷಿ ಪಟ್ಟಿದ್ರು. ಆದ್ರೆ, ಈಗ ಯಾಕಾದ್ರೂ ಈ ಯೋಜನೆ ಬಂತಪ್ಪ ಅಂತ ತಲೆ ಮೇಲೆ ಕೈ ಹೊತ್ತು ಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಜಲ ಮಂಡಳಿಯವರು ಪ್ರತಿ ತಿಂಗಳಿಗೆ 7 ಸಾವಿರ, 8 ಸಾವಿರ, 4 ಸಾವಿರ, 6 ಸಾವಿರ ಬಿಲ್ ನೀಡ್ತಾ ಇದಾರೆ.
ಬಿಲ್ ನೋಡಿದಂತಹ ಜನರು ಶಾಕ್ ಆಗಿದ್ದಾರೆ. ರಾಜೇಂದ್ರ ನಗರ ಮತ್ತು ರವೀಂದ್ರ ನಗರದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರಿನ ಯೋಜನೆ ಜಾರಿಗೆಯಾಗಿದೆ. ಪ್ರತಿಯೊಂದು ನಲ್ಲಿಗಳಿಗೆ ಮೀಟರ್ ಅಳವಡಿಕೆ ಮಾಡಲಾಗಿದೆ. ಮೀಟರ್ ನೋಡಿ, ಜಲಮಂಡಳಿಯವರು ಬಿಲ್ ನೀಡ್ತಾ ಇದಾರೆ. ಆದ್ರೆ, ಆ ಬಿಲ್ ನೋಡಿದ ಜನರು ಬೆಚ್ಚಿ ಬೀಳುವಂತಾಗಿದೆ.
ವರ್ಷಕ್ಕೆ ಬರೋ ಬಿಲ್ ಪ್ರತಿ ತಿಂಗಳಿಗೆ ಒಮ್ಮೆ ಬರ್ತಾ ಇರೋದು ಇದಕ್ಕೆ ಕಾರಣ. ಇನ್ನು ಜಲಮಂಡಳಿಯವರು ನೀಡಿರುವ ಬಿಲ್‌ನಲ್ಲಿ ಎಷ್ಟು ನೀರು ಬಳಕೆ ಮಾಡಿದ್ದಾರೆ ಅನ್ನೋದನ್ನು ನಮೂದು ಮಾಡದೆ, ಕೇವಲ ಸಾವಿರಾರು ರೂಪಾಯಿ ಲೆಕ್ಕದಲ್ಲಿ ಬಿಲ್ ನೀಡಿರೋದು ಸಂಶಯಕ್ಕೆ ಕಾರಣವಾಗಿದೆ. ನಾವಂತೂ ಬಿಲ್ ಕಟ್ಟೋದಿಲ್ಲ. ಕಾನೂನು ಮೊರೆ ಹೋಗ್ತೀವಿ.. ಇದರ ವಿರುದ್ಧ ಹೋರಾಟ ನಡೆಸ್ತೀವಿ ಅಂತ ಜನರು ಆಕ್ರೋಶ ವ್ಯಕ್ತಪಡಿಸಿದ್ತಾ ಇದಾರೆ.