ಶಿವಮೊಗ್ಗ : ಕೆಳದಿ ಶಿವಪ್ಪನಾಯಕ ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿ ನಿಲಯದ ಕಾಂಪೌಂಡ್ ಇದೀಗ ಕ್ಯಾಂಪಸ್‌ನ ಆಕರ್ಷಕ ತಾಣವಾಗಿ ಮಾರ್ಪಟ್ಟಿದೆ. ಕಾಂಪೌಂಡ್ ಮೇಲೆ ಬಿಡಿಸಲಾಗಿರುವ ಬಣ್ಣ ಬಣ್ಣದ ಚಿತ್ರಗಳು ಹೊಸ ರಂಗನ್ನ ನೀಡಿವೆ.
ಕೃಷಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯರಿಂದ ಚಿತ್ರಗಳು ಚಿತ್ರಿಸ್ಪಟ್ಟಿದ್ದು ಮನಮೋಹಕವಾಗಿವೆ. ಈ ಗೋಡೆ ಚಿತ್ರಗಳು ಕೃಷಿ, ಮಹಿಳಾ ಸಬಲೀಕರಣ, ಸಮಾಜದಲ್ಲಿ ಮಹಿಳೆಯರ ಪಾತ್ರದ ವಿಚಾರಗಳನ್ನು ಬಿಂಬಿಸುತ್ತಿವೆ. ವಿದ್ಯಾರ್ಥಿನಿಯರು ಕಳೆದ ಒಂದು ವಾರದಿಂದ ಗೋಡೆ ಚಿತ್ರ ಬಿಡಿಸುವ ಕಾರ್ಯದಲ್ಲಿ ನಿರತರಾಗಿದ್ದು, ಇನ್ನು ಎರಡು ದಿನಗಳಲ್ಲಿ ಪೂರ್ಣವಾಗಿಲಿದೆ. ನಿತ್ಯವೂ ಓದು ಓದು ಎಂದು ಹುದುಗಿ ಹೋಗಿದ್ದ ವಿದ್ಯಾರ್ಥಿನಿಯರ ಕಲೆಗೆ ಮತ್ತೆ ಪ್ರೋತ್ಸಾಹ ಸಿಕ್ಕಿದ್ದು, ಗೋಡೆ ಚಿತ್ರಗಳಲ್ಲಿ ಅವು ಬಿಂಬಿಸುತ್ತಿವೆ.