ಲೋಕ ಕಲ್ಯಾಣಕ್ಕೆ ಸಹಸ್ರ ನಾರಿಕೇಳ ಮಹಾಗಣಪತಿಯಾಗ 

ಶಿವಮೊಗ್ಗ : ವಿಪ್ರ ಯುವ ಪರಿಷತ್‌ನಿಂದ ಲೋಕಕಲ್ಯಾಣಕ್ಕಾಗಿ ಸಹಸ್ರ ನಾರಿಕೇಳ ಮಹಾಗಣಪತಿಯಾಗ ಹಾಗೂ ಗೋರಕ್ಷಕರಿಗೆ, ಧರ್ಮದರ್ಶಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸ್ವಾಮೀಜಿಗಳು ಹಾಗೂ ನಟ ವಸಿಷ್ಠ ಸಿಂಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ವೇಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ವಿಚಾರವಾಗಿ ಮಾತನಾಡಿದ ಮಂಗಳೂರು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಹಿಂದೂ ಧರ್ಮದ ಅನಗತ್ಯವಾಗಿ ದಾಳಿ ಮಾಡುವ ಕೆಲಸಗಳು ನಡೆಯುತ್ತಿವೆ. ಪಿಎಫ್‌ಐ ಹಾಗೂ ಎಸ್‌ಡಿಪಿಐ ನಂತಹ ಗುಂಪುಗಳು ಇಂಥಹ ಕೆಲಸದಲ್ಲಿ ಭಾಗಿಯಾಗುತ್ತಿವೆ. ಆದ್ದರಿಂದ ಇವುಗಳಿಗೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.