ಶಿವಮೊಗ್ಗ : ಪ್ರಧಾನಿಯಾಗಿ ನರೇಂದ್ರ ಮೋದಿ ಆಡಳಿತ ೮ ವರ್ಷ ಪೂರೈಸಿದೆ. ಈ ಹಿನ್ನೆಲೆ ಮೋದಿಯ 8 ವರ್ಷದ ಸೇವೆ, ಸುಶಾಸನ ಹಾಗೂ ಬಡವರ ಕಲ್ಯಾಣ ಅಭಿಯಾನದ ಅಂಗವಾಗಿ ವಿಕಾಸ ತೀರ್ಥ ರ್‍ಯಾಲಿ ನಡೆಯಿತು
ಶಿವಮೊಗ್ಗ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಈ ರ್‍ಯಾಲಿ ನಡೆಯಿತು. ರಾಮಣ್ಣ ಶ್ರೆಟ್ಟಿ ಪಾರ್ಕ್‌ನಿಂದ ಆರಂಭವಾಗಿದ್ದ ಬೈಕ್ ರ್‍ಯಾಲಿಯು ಪೋಲಿಸ್ ಚೌಕಿಯಲ್ಲಿ ಅಂತ್ಯವಾಯಿತು. ಸಾಕಷ್ಟು ಬಿಜೆಪಿ ಕಾರ್ಯಕರ್ತರು ರ್‍ಯಾಲಿಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್, ದೇಶದಲ್ಲಿ ಕಾರ್ಯಕರ್ತರು ಪಕ್ಷ ಅಂತ ಇದ್ರೆ ಅದು ಬಿಜೆಪಿ ಮಾತ್ರ. ಪ್ರಧಾನಿ ನರೇಂದ್ರ ಮೋದಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ ಎಂದರು.