ಸಾಗರ : ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ೮ಕ್ಕೆ ವರ್ಷ. ಈ ಹಿನ್ನೆಲೆ ದೇಶದ ಮೂಲೆ ಮೂಲೆಗಳಲ್ಲಿಯೂ ಬಿಜೆಪಿ ಕಾರ್ಯಕರ್ತರು ನಾನಾ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದಾರೆ.
ಸಾಗರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಬಡವರ ಕಲ್ಯಾಣ ಕಾರ್ಯಕ್ರಮ ಅಂಗವಾಗಿ ವಿಕಾಸ ತೀರತ್ ರ್‍ಯಾಲಿ ನಡೆಯಿತು. ದುಗಾಂಬಾ ದೇವಸ್ಥಾನದಿಂದ ಜೋಗ ರೋಡ್ ಪೋಲಿಸ್ ಸ್ಟೇಷನ್ ಸರ್ಕಲ್ ತನಕ ರ್‍ಯಾಲಿ ನಡೆಸಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ನಗರ ಮಂಡಲ ಅಧ್ಯಕ್ಷ ಗಣೇಶ್ ಪ್ರಸಾದ್ ಕೆ.ಆರ್, ನಗರಸಭೆ ಅಧ್ಯಕ್ಷರಾದ ಮಧುರ ಶಿವಾನಂದ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ರ್‍ಯಾಲಿಯಲ್ಲಿ ಭಾಗಿಯಾಗಿದ್ದರು.