ಶಿವಮೊಗ್ಗ : ನಿರಂತರವಾಗಿ ಸುರಿಯುತ್ತಿರುವ ಮಳೆ ಸೃಷ್ಟಿಸಿರುವ ಅವಾಂತರಗಾಳು ಒಂದೆರಡಲ್ಲ. ಹರಿಗೆಯ ಕೆರೆ ಕೋಡಿ ಒಡೆದು ಹೋಗಿದ್ದು ಗುರುಪುರ ಚಾನಲ್ ಮೂಲಕ ಹಾದು ಹೋಗಬೇಕಾಗಿರುವ ನೀರು ಚಾನೆಲ್‌ನಲ್ಲಿಯೇ ಬ್ಲಾಕ್ ಆಗಿದೆ.
ಹೀಗಾಗಿ ಹರಿಗೆ ಕೆರೆಯ ಹೆಚ್ಚುವರಿ ನೀರು ಸಂಪೂರ್ಣವಾಗಿ ವಿದ್ಯಾನಗರ ಚಾನಲ್ ಮೂಲಕ ಬರುತ್ತಿದೆ. ಇದರಿಂದ ಇದುವರೆಗೂ ವಿದ್ಯಾನಗರ ಶಾಂತಮ್ಮ ಲೇಔಟ್‌ನಲ್ಲಿ ನೀರು ಸಂಪೂರ್ಣವಾಗಿ ಕಡಿಮೆಯಾಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನಾವು ಪ್ರತಿ ವರ್ಷ ಸಂಕಷ್ಟ ಪಡುವಂತಾಗಿದೆ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.