ಡಿಸೆಂಬರ್ ೨೮ರಂದು ವಿಧಾನಸೌಧ ಚಲೋ ರ್‍ಯಾಲಿ

ಶಿವಮೊಗ್ಗ :  ಮುಖ್ಯಮಂತ್ರಿಗಳಿಗೆ ವಿವಿಧ ಹಕ್ಕೊತ್ತಾಯಗಳ ಜಾರಿಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಧಾನಸೌಧ ಚಲೋ ರ್‍ಯಾಲಿ ಹಮ್ಮಿಕೊಂಡಿದೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಡಿಎಸ್‌ಎಸ್ ಮುಖಂಡ ಹಾಲೇಶಪ್ಪ, ಪರಿಶಿಷ್ಟ ಜಾತಿ, ವರ್ಗ ದೌರ್ಜನ್ಯ ನಿಯಂತ್ರಣ ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.

ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರದ ಮಾದರಿಯಲ್ಲಿ ಎಸ್‌ಸಿಎಸ್‌ಪಿ ಅಥವಾ ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಬೇಕು. ವಿದ್ಯಾರ್ಥಿ ವೇತನ, ಬಡ್ತಿ ಮೀಸಲಾತಿ, ಬ್ಯಾಕ್‌ಲಾಗ್ ನೇಮಕಾತಿ, ಹೀಗೆ ಹಲವು ಹಕ್ಕೊತ್ತಾಯಗಳ ಜಾರಿಗೆ ಆಗ್ರಹಿಸಿ ಡಿಸೆಂಬರ್ 28ರಂದು ಚಿಕ್ಕ ಲಾಲ್‌ಬಾಗ್‌ನಿಂದ ವಿಧಾನಸೌಧ ಚಲೋ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.