ಹೈಲೆಟ್ಸ್:
ಅಂಬೇಡ್ಕರ್ ನಗರದಲ್ಲಿ ಒತ್ತುವರಿ ತೆರವು
ಜೆಸಿಬಿಗೆ ಅಡ್ಡಲಾಗಿ ಮಲಗಿ ಅಲೆಮಾರಿ ಜನಾಂಗದವರ ಆಕ್ರಂದನ
ಸರಕಾರ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ
ಶಿವಮೊಗ್ಗ:
ನಾವು ಇಲ್ಲಿ ೧೦ ವರ್ಷಗಳಿಂದ ವಾಸವಾಗಿದ್ದೇವೆ. ೪೦೦ ಕುಟುಂಬಗಳು ಇಲ್ಲಿ ವಾಸ ಮಾಡ್ತಾ ಇದೀವಿ. ಆದ್ರೆ, ಈಗ ತುಂಗಾ ಮೇಲ್ದಂಡೆ ಯೋಜನೆಯವರು ೫ ಎಕರೆ ಮೂರು ಗಂಟೆ ಜಾಗ ತಮಗೆ ಸೇರುತ್ತದೆ ಎಂದು ತಗಾದೆ ತೆಗೆದಿದ್ದಾರೆ. ನಾವೇನು ಮಾಡೋದು.. ಎಲ್ಲಿಗೆ ಹೋಗೋದು.. ಇದ್ದ ಒಂದು ಸೂರು ಕಳೆದುಕೊಂಡ್ರೆ ಹೇಗೆ ಅಂತ ಆ ಜನ್ರು ಗೋಳ್ತಾಡ್ತಾ ಇದಾರೆ. ಶಿವಮೊಗ್ಗದ ಹೊರವಲಯದ ಅಂಬೇಡ್ಕರ್ ನಗರದ ನಿವಾಸಿಗಳ ಗೋಳು.
ನೂರಾರು ಕುಟುಂಬಗಳು ಇಲ್ಲಿವ ಹಲವಾರು ವರ್ಷಗಳಿಂದ ವಾಸ ಮಾಡ್ತಾ ಇದಾರೆ. ಆದ್ರೆ, ಮೂಲ ಸೌಕರ್ಯವನ್ನು ಮಾತ್ರ ಸರ್ಕಾರ ನೀಡಿರಲಿಲ್ಲ. ಜಿಲ್ಲಾಡಳಿತಕ್ಕೂ ಹಲವಾರು ಸಂಘಟನೆಗಳು ಮನವಿ ಮಾಡಿದ್ದವು. ಇಷ್ಟಾದ್ರೂ ಇದೀಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಇದುವೇ ಅಲೆಮಾರಿ ಜನಾಂಗಗಳ ಆಕ್ರೋಶಕ್ಕೆ ಕಾರಣವಾಗಿದೆ. ೩ ಸರ್ವೆ ನಂಬರ್‌ಗಳಲ್ಲಿ ನಾವು ವಾಸವಾಗಿದ್ದೇವೆ, ಅಗತ್ಯ ಸೌಲಭ್ಯಗಳನ್ನು ಸಹ ಕಲ್ಪಿಸಲಾಗಿಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲ ಇಲ್ಲ. ಈಗ ಜಾಗ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಜೆಸಿಬಿಗೆ ಅಡ್ಡಲಾಗಿ ಮಲಗಿ, ಸಾವಿಗೂ ಹೆದರೋದಿಲ್ಲ.. ನಮಗೆ ಸೂರು ಬೇಕು ಎಂದು ಜನ್ರು ಗೋಳಾಡುತ್ತಿದ್ದಾರೆ.