ಕಾಂಗ್ರೆಸ್ ಶಾಸಕರ ವಜಾಗೊಳಿಸಲು ಒತ್ತಾಯ  

ಶಿವಮೊಗ್ಗ : ರಾಷ್ಟ್ರಧ್ವಜವನ್ನ ಬೇಕಾಬಿಟ್ಟಿಯಾಗಿ ಹಿಡಿದು ಪ್ರತಿಭಟನೆ ನಡೆಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಕಾಂಗ್ರೆಸ್ ಶಾಸಕರ ಶಾಸಕತ್ವ ಸ್ಥಾನವನ್ನ ರದ್ದುಗೊಳಿಸಬೇಕೆಂದು ಆಗ್ರಹಿಸಿ ರಾಷ್ಟ್ರಭಕ್ತರ ಬಳಗ ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನೆ ನಡೆಸಿದೆ.

ಈಶ್ವರಪ್ಪನವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆಪಾದಿಸಿ ಅವರನ್ನ ಪದೇ ಪದೇ ರಾಷ್ಟ್ರದ್ರೋಹಿ ಎಂದು ಕಾಂಗ್ರೆಸ್‌ನವರು ಕೆರೆದು ಸಚಿವರಿಗೆ ಅವಮಾನ ಮಾಡುತ್ತಿದ್ದಾರೆ. ಈ ಮೂಲಕ ಸುಳ್ಳು ಆಪಾದನೆ ಮಾಡಿ ಕಲಾಪದ ಸಮಯವನ್ನ ಹಾಳು ಮಾಡಿದ್ದಾರೆ. ಹಾಗೂ ಸದನದಲ್ಲಿ ರಾಷ್ಟ್ರಧ್ವಜವನ್ನ ಬೇಕಾಬಿಟ್ಟಿಯಾಗಿ ಹಿಡಿದು ಪ್ರದರ್ಶಿಸಿ ರಾಷ್ಟ್ರಧ್ವಜದ ಘನತೆಗೆ ಅಪಚಾರವೆಸಗಿದ್ದಾರೆ. ಈ ರೀತಿಯಾದ ದುರ್ನಡತೆಗೆ ಕಾರಣವಾದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹಾಗೂ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದ ಶಾಸಕರ ಶಾಸಕತ್ವ ಸ್ಥಾನವನ್ನ ರದ್ದುಗೊಳಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ಜೊತೆಗೆ ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.