ಶಿವಮೊಗ್ಗ : ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಬುದ್ಧಾನಗರದ 30ವರ್ಷದ ಖಾಸಿಫ್ ಹಾಗೂ ಜೆಪಿ ನಗರದ 20ವರ್ಷದ ಸೈಯದ್ ನದೀಂ ಎಂಬುವವರು ಬಂಧಿತ ಆರೋಪಿಗಳು.
ಹೋಟೆಲ್‌ಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದ ಭಜರಂಗದಳದ ಕಾರ್ಯಕರ್ತ ಹರ್ಷನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಕಾಮತ್ ಪೆಟ್ರೋಲ್ ಬಂಕ್ ಎದುರು ಭಾರತೀ ಕಾಲೋನಿ ಕ್ರಾಸ್‌ನ ರಸ್ತೆಯಲ್ಲಿ ನಡೆದಿದ್ದ ಹಲ್ಲೆಯಿಂದಾಗಿ ಹರ್ಷ ಮೃತಪಟ್ಟಿದ್ದ.