ಇದ್ದರೂ ಇಲ್ಲದಂತಾದ ತುಮರಿ ಆಂಬುಲೆನ್ಸ್ 

ತುಮರಿ : ದ್ವೀಪ ಪ್ರದೇಶ ತುಮರಿಯಲ್ಲಿ ಆಂಬುಲೆನ್ಸ್ ಕಾರಣಕ್ಕೆ ಮತ್ತೊಂದು ಸಾವು ಸಂಭವಿಸಿದೆ. ಈ ಮೊದಲು ಅಂಬುಲೆನ್ಸ್ ಸೇವೆ ಸಿಗದೇ ಅವಳಿ ಸಾವು ಸಂಭವಿಸಿತ್ತು. ಆನಂತರ ವೆಂಟಿಲೇಟರ್ ಇರುವ ಅಂಬುಲೆನ್ಸ್‌ಗಾಗಿ ಹೋರಾಟ ನಡೆಯಿತು. ಆಬುಂಲೆನ್ಸ್ ಕೂಡ ಬಂತು. ಆದರೂ ಸಾವಿನ ಆಟ ಮುಂದುವರೆದಿದೆ.

ಬೆಳಗ್ಗೆ 10 ಗಂಟೆ ವೇಳೆಗೆ ಡಾಕಪ್ಪ ಜೈನ್ ಎಂಬುವವರ ಆರೋಗ್ಯದಲ್ಲಿ ಏರುಪೇರಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ವೆಂಟಿಲೇಟರ್ ಇರುವ ಆಂಬುಲೆನ್ಸ್ ಸೇವೆ ಪಡೆಯಲು ಪ್ರಯತ್ನಿಸಲಾಗಿದೆ. ಆದರೇ ದುರಾದೃಷ್ಟವಶಾತ್ ಅಷ್ಟೊತ್ತಿಗಾಗಲೇ ವಕ್ಕೋಡಿ ಬಳಿ ಆ ಆಂಬುಲೆನ್ಸ್‌ಗೆ ಅಫಘಾತವಾಗಿದೆ. ಡ್ರಿಂಕ್ ಅಂಡ್ ಡ್ರೈವ್‌ನಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಅಲ್ಲಿ ಯಾವುದೇ ಪ್ರಾಣಾಹಾನಿಯಾಗಿಲ್ಲ.

ಇನ್ನೊಂದೆಡೆ ಕುಸಿದು ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಡಾಕಪ್ಪ ಜೈನ್‌ಗೆ 2 ಗಂಟೆಯ ಬಳಿಕ, ಅಂದ್ರೆ 12 ಗಂಟೆಗೆ ಆಂಬುಲೆನ್ಸ್ ಸೇವೆ ಲಭ್ಯವಾಗಿದೆ. ಅವರನ್ನು ನಗರ ಆಂಬುಲೆನ್ಸ್ ತರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕೆ ಕಳುಹಿಸಿದ್ದಾರೆ. ಆದರೆ ಕೊನೆಗೂ ಆ ಜೀವ ಉಳಿಯಲಿಲ್ಲ. ಹೋರಾಟದ ಮೂಲಕ ಅಂಬುಲೆನ್ಸ್ ಏನೋ ಗ್ರಾಮಕ್ಕೆ ಸಿಗ್ತು. ಆದರೆ ಅದೇ ಅಂಬುಲೆನ್ಸ್ ಚಾಲಕನ ಯಡವಟ್ಟಿನಿಂದಾಗಿ ಅಪಘಾತವಾಗಿದೆ. ಈ ಎಲ್ಲದರ ನಡುವೆ ವಿಧಿಯಾಟಕ್ಕೆ ಒಂದು ಜೀವ ಕೂಡ ಬಲಿಯಾಗಿದೆ.