ಇದೊಂದು ಐತಿಹಾಸಿಕ ಕಾರ್ಯ: ಬಿಎಸ್‌ವೈ 

ಶಿಕಾರಿಪುರ : ಇಲ್ಲಿನ 110 ಗ್ರಾಮಗಳ 249ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಗಿನ ಅರ್ಪಿಸಿ ಚಾಲನೆ ನೀಡಿದರು.

ಇದು ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಸುಮಾರು 850 ಕೋಟಿ ರೂಪಾಯಿಗಳ ಏತ ನೀರಾವರಿ ಯೋಜನೆಯಾಗಿದೆ. ಇದರ ಭಾಗವಾಗಿ ಅಡಗಂಟಿ ಗ್ರಾಮದ ಸಮೀಪ ನಿರ್ಮಿಸಿರುವ ಏರುಕೊಳವೆ ಮಾರ್ಗ ತೊಟ್ಟಿಗೆ ನೀರು ಹರಿಸಲಾಗುವುದು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಕಾರ್ಯವಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಇದು ಅನುಷ್ಠಾನಗೊಳ್ಳಲಿದೆ ಎಂದರು.