ಶಿವಮೊಗ್ಗ : ಬಿಜೆಪಿಯವರು ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನ ಮಾಡಬಾರದೆಂಬ ನಿಟ್ಟಿನಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕೀಹೊಳಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರಿಗೆ ಚುನಾವಣೆ ನಡೆಸಲು ಇಷ್ಟವಿಲ್ಲ. ಈ ಮೊದಲು ಚುನಾವಣೆಗೆ ಅವಕಾಶವಿತ್ತು. ಆನಂತರ ಚುನಾವಣೆಯನ್ನ ವಿಳಂಬ ಮಾಡಲಿಕ್ಕಾಗಿಯೇ ಸಮಿತಿಯೊಂದನ್ನ ರಚಿಸಿದ್ದಾರೆ ಎಂದು ಆರೋಪಿಸಿದರು.