ಶಿವಮೊಗ್ಗ : ಸರ್ಕಾರವೇನೋ ಎಲ್ಲಾ ಚಿತ್ರ ಮಂದಿರಗಳಲ್ಲಿ ಶೇಕಡಾ ೧೦೦ ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದೆ. ಆದ್ರೆ, ಚಿತ್ರಗಳಗನ್ನ ತೆರೆಮೆಲೆ ಹಾಕಲು ಹೊಸ ಚಿತ್ರಗಳೆ ಇಲ್ಲದೆ ಚಿತ್ರ ಮಂದಿರ ಮಾಲೀಕರು ಗೋಳಾಡುವಂತಾಗಿದೆ.
ಯಾವಾಗ ಲಾಕ್‌ಡೌನ್ ಆಗುತ್ತೋ ಅನ್ನೋ ಕಾರಣಕ್ಕೆ ಸಾಕಷ್ಟು ಬಹು ಬಜೆಟ್‌ನ ಸಿನಿಮಾಗಳು ಬಿಡುಗಡೆಯ ದಿನಾಂಕಗಳನ್ನ ಮುದೂಡಿವೆ. ಕೆಲವೊಂದಿಷ್ಟು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಈ ಕಾರಣದಿಂದಾಗಿ ಸಿನಿಮಾ ಮಂದಿರಗಳಲ್ಲಿ ಶೇಕಡಾ 100 ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿದರು ಕೂಡ ಹೊಸ ಸಿನಿಮಾಗಳೇ ಇಲ್ಲದಂತಾಗಿದೆ. ಹಾಗಾಗಿ ಚಿತ್ರಮಂದಿರದ ಮಾಲೀಕರು ಮುಂದೇನು ಅಂತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.