ಜೆಎನ್‌ಎನ್ ಕಾಲೇಜಿನಲ್ಲಿ ಟೆಕ್ ಅನ್ವೇಷಣ್ ಕಾರ್ಯಕ್ರಮ

ಶಿವಮೊಗ್ಗ : ಜೆಎನ್‌ಎನ್ ಕಾಲೇಜಿನಲ್ಲಿ ಮೇ ೨೭ ಹಾಗೂ ೨೮ ರಂದು ಟೆಕ್ ಅನ್ವೇಷಣ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ನಾಗೇಂದ್ರ ಪ್ರಸಾದ್, ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಂದ ನಾನಾ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ೮೦ಕ್ಕೂ ಹೆಚ್ಚಿನ ನಾವಿನ್ಯ ಪ್ರಯೋಗಗಳು ಪ್ರದರ್ಶನಗೊಳ್ಳಲಿವೆ.

ಕಾರ್ಯಕ್ರಮವನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಉದ್ಘಾಟಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ನಾಗೇಂದ್ರ ಮಾಹಿತಿ ನೀಡಿದರು.