ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ೩ ದಿನಗಳ ಕಾಲ ನವಭಾರತ ಮೇಳವನ್ನು ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ನಟಿ ಹಾಗೂ ಬಿಜೆಪಿ ಮುಖಂಡೆ ತಾರಾ ಅನುರಾಧ ಭಾಗವಹಿಸಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತೈಲ ಬೆಲೆ ಏರಿಕೆಗೆ ಕಾರಣ ಏನು ಅಂತ ನಿಮಿಗೆಲ್ಲಾ ಗೊತ್ತಿದೆ. ಇದೆಲ್ಲಾ ಯುಪಿಎ ಸರ್ಕಾರ ಮಾಡಿದ ಸಾಲ. ಅದನ್ನು ಈಗ ಬಿಜೆಪಿ ಸರ್ಕಾರ ತೀರಿಸುತ್ತಿದೆ. ಹಾಗಿದ್ದಾಗ ಈ ರೀತಿ ಆಗೋದು ಸಹಜ. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರ್ಕಾರ ಸರಿ ಮಾಡಲಿದೆ ಅನ್ನೋ ವಿಶ್ವಸ ನಿಮಗಿರುವಂತೆ ನನಗೂ ಇದೆ ಎಂದರು. ಇನ್ನು ನವಭಾರತ ಮೇಳ ಸಮಾರೋಪ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.