ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡ್ತೇವೆ

ಬೆಂಗಳೂರು : ಶಾಲೆಗಳಲ್ಲಿ ಯಾಕೆ ಕೊರೊನಾ ಹಬ್ಬಿದೆ. ಎಲ್ಲಿ ಲೋಪ ಆಗಿದೆ. ಎಲ್ಲ ವಿಚಾರವನ್ನು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಕೊರೊನಾ ನಿಯಂತ್ರಣದ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡ್ತೇವೆ. ವಿದ್ಯಾರ್ಥಿಗಳು, ಪೋಷಕರು ಆತಂಕ ಪಡಬೇಕಾಗಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪೋಷಕರು,  ಶಿಕ್ಷಕರಿಗೆ ಡಬಲ್ ಡೋಸ್ ವ್ಯಾಕ್ಸಿನ್ ಆಗಿರಬೇಕು. ಒಮಿಕ್ರಾನ್ ಹಾಗೂ ಕ್ಲಸ್ಟರ್ ಗೆ ಹೊಸ ಮಾರ್ಗಸೂಚಿ ಸಿದ್ದಪಡಿಸುತ್ತೇವೆ. ನವೆಂಬರ್ ತಿಂಗಳ ಕೊವೀಡ್ ಪರಿಸ್ಥಿತಿ ಬಗ್ಗೆ ಅನೌಪಚಾರಿಕವಾಗಿ ಅಧಿಕಾರಿಗಳಿಂದ ಮಾಹಿತಿ ಪಡೀತಿದ್ದೇನೆ. ಎಲ್ಲ ಮಾಹಿತಿ ಪಡೆದು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ.