ಶಿವಮೊಗ್ಗ : ಮಂಡೇನಕೊಪ್ಪದಲ್ಲಿನ ಸುರಭಿ ಗೋಶಾಲೆಯಲ್ಲಿ ಏಪ್ರಿಲ್ ೬ರಂದು ವಸತಿ ಸಮುಚ್ಚಯದ ಲೋಕಾರ್ಪಣಾ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ತಿಳಿಸಿದರು.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಏಪ್ರಿಲ್ ೫ರಂದು ಸಂಜೆ ೬ ಗಂಟೆಗೆ ರಾಕ್ಷೆಘ್ನಹೋಮ ನಡೆಯಲಿದೆ. ಬಳಿಕ ಏಪ್ರಿಲ್ ೬ರಂದು ಬೆಳಗ್ಗೆ ವಸತಿ ಸಮುಚ್ಚಯದ ಗೃಹಪ್ರವೇಶ ಕಾರ್ಯ ನಡೆಯಲಿದೆ. ಆನಂತರ ಗೋಸೂಕ್ತ ಹೋಮ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಸಂಜೆ ೬ ಗಂಟೆಗೆ ವಸತಿ ಸಮುಚ್ಚಯದ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಪದ್ಮಶ್ರೀ ಪುರಸ್ಕೃತರಾದ ಹೆಚ್.ಆರ್.ಕೇಶವಮೂರ್ತಿಯವರಿಗೆ ಸನ್ಮಾನ ಮಾಡಲಾಗುವುದು. ಕಾರ್ಯಕ್ರಮದ ಉದ್ಘಾಟಕರಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಗಮಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಬರಲಿದ್ದಾರೆ ಎಂದು ಮಾಹಿತಿ ನೀಡಿದರು.