ಶಿವಮೊಗ್ಗ : ನಿಮ್ಮ ತಪ್ಪು ಮುಚ್ಚಿ ಹಾಕಲು ಸರಣಿ ಸುಳ್ಳು ಹೇಳಬೇಡಿ, ಕಾಂಟ್ರಾಕ್ಟರ್ ಹೇಳೋ ಹಾಗೆ ಮಾಡೋದಾದ್ರೆ ಮೆಸ್ಕಾಂ ಡಿಪಾರ್ಟ್‌ಮೆಂಟ್ ಏನಕ್ಕೆ ಬೇಕು... ನರೇಂದ್ರ ಮೋದಿ ಬೋರ್ಡ್ ಏನಕ್ಕೆ ಹಾಕಿಲ್ಲ.. ಏನ್ ಕೆಲಸ ಮಾಡ್ತಾ ಇದೀರಾ..? ಯಾರು ಇಂಜಿನಯರ್... ಎಂದು ಇಂಧನ ಸಚಿವ ಸುನೀಲ್ ಕುಮಾರ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯ ಅನುಷ್ಟಾನದ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲೆಯಲ್ಲಿ ಈ ಯೋಜನೆ ಹೇಗೆ ನಡೆಯುತ್ತಿದೆ ಎಂಬುದರ ಕುರಿತಾಗಿ ಸಚಿವರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮಹಾನಗರ ಪಾಲಿಕೆ ಸುನೀತ ಅಣ್ಣಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ನಿರಂತರ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಸಚಿವರು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಮೆಸ್ಕಾಂ ಅಧಿಕಾರಿಗಳು ತಡಬಡಾಯಿಸಿದರು.