ಶಿವಮೊಗ್ಗ : ಇಲ್ಲಿನ ಭಿಮೇಶ್ವರ ದೇವಾಲದ ಆವರದಲ್ಲಿ ಶ್ರೀ ಮಾರಿಕಾಂಬ ಮೈಕ್ರೋ ಫೈನಾಸ್ಸ್ ವತಿಯಿಂದ ಶ್ರೀ ಸೂಕ್ತ ಹವನ ಕಾರ್ಯಕ್ರಮ ನಡೆಯಿತು. ಗೌರಿಗದ್ದೆ ವಿನಯ್ ಗುರೂಜಿ, ಆನಂದ್ ಗುರೂಜಿ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿಕೊಂಡಿದ್ದರು.
ಈ ವೇಳೆ ಮಾತನಾಡಿದ ವಿನಯ್ ಗುರೂಜಿ, ಯಡಿಯೂರಪ್ಪ ಹಾಗೂ ಈಶ್ವರಪ್ಪ ಸೈಕಲ್ ಹತ್ತಿ ಅಂದು ಓಡಾಡಿದ್ದಕ್ಕೆ ಇಂದು ಬಿಜೆಪಿ ಇದೆ. ಅಮ್ಮನ ಆರ್ಶೀವಾದದಿಂದ ನಮ್ಮ ಊರಲ್ಲಿ ಗಲಾಟೆಗಳೆಲ್ಲ ಕಡಿಮೆಯಾಗಲಿ. ಸಹಿಷ್ಣುತೆಯಿಂದ ಬದುಕೊ ಶಿವಮೊಗ್ಗ ಮತ್ತೆ ವಾಪಾಸ್ ಬರಲಿ. ಎಲ್ಲರ ಆರೋಗ್ಯ ಸುಧಾರಿಸಲಿ ಎಂದರು.
ಈ ವೇಳೆ ವೇದಿಕೆ ಮೇಲೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಕೆ.ಈ.ಕಾಂತೇಶ್, ಚೈತ್ರ ಕುಂದಾಪುರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.