ಸೂಡಾ ನೂತನ ಅಧ್ಯಕ್ಷರಿಂದ ಅಧಿಕಾರ ಸ್ವೀಕಾರ 

ಶಿವಮೊಗ್ಗ : ಶಿವಮೊಗ್ಗ-ಭಧ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎನ್.ಜಿ.ನಾಗರಾಜ್ ಅಧಿಕಾರ ಸ್ವೀಕರಿಸಿದ್ದಾರೆ. ಸೂಡಾ ಕಚೇರಿಯಲ್ಲಿ ನಡೆದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಎನ್.ಜಿ.ನಾಗರಾಜ್ ಅಧಿಕಾರ ಸ್ವೀಕರಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಕಳೆದ ೨೫-೩೦ ವರ್ಷಗಳಿಂದ ಸಂಘಟನೆ ಕೆಲಸ ಮಾಡಿ ಗೊತ್ತಿತ್ತು. ಅಧಿಕಾರವನ್ನ ನಾನು ಅನುಭವಿಸಿರಲಿಲ್ಲ. ಅಧಿಕಾರ ನನಗೆ ಹೊಸತು. ಆದ್ರೆ ಅಧಿಕಾರದಲ್ಲಿ ಇರುವವರೆಲ್ಲ ನನಗೆ ಆತ್ಮೀಯರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮೇಯರ್ ಸುನೀತಾ ಅಣ್ಣಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.