ಶಿವಮೊಗ್ಗ: ನಗರದ ಎನ್‌ಯು ಕಿಡ್ನಿ ಆಸ್ಪತ್ರೆಯಲ್ಲಿ ೧೦ ತಿಂಗಳ ಮಗುವಿಗೆ ಯಶಸ್ವಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಹತ್ತು ತಿಂಗಳ ಮಗುವೊಂದು ಹುಟ್ಟಿದಾಗಿನಿಂದ ಬಲಭಾಗದ ಕಿಡ್ನಿ ತೊಂದರೆಯಿAದ ಬಳಲುತಿತ್ತು. ಇದರಿಂದ ಬಲಭಾಗದ ಕಿಡ್ನಿ ನಾಳವು ಸಂಕುಚಿತಗೊAಡು ಮೂತ್ರದ ಹರಿವಿಗೆ ಅಡಚಣೆ ಉಂಟಾಗಿತ್ತು. ಈ ತೊಂದರೆಯನ್ನು ಲ್ಯಾಪ್ರೋಸ್ಕೋಪಿಕ್ ಮುಖಾಂತರ ನಿವಾರಿಸಲಾಗಿದೆ. ಸಣ್ಣ ಮಕ್ಕಳಿಗೆ ದೋಷ ಹಾಗೂ ಗಾಯವಿಲ್ಲದಂತೆ ಶಸ್ತ್ರ ಚಿಕಿತ್ಸೆ ಮಾಡುವುದು ಕ್ಲಿಷ್ಟಕರ. ಆದರೆ ಇಂಥದೊAದು ಪ್ರಯತ್ನದಲ್ಲಿ ಇದೀಗ ಶಿವಮೊಗ್ಗದ ಎನ್‌ಯು ಕಿಡ್ನಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.