ಕೊರೊನಾ ಮೂರನೆ ಅಲೆ ಭೀತಿ ಇಲ್ಲ. ಓಮಿಕ್ರಾನ್ ಕೂಡ ಆತಂಕಕಾರಿ ಅಲ್ಲ. ಆದರೂ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು. ಅದಕ್ಕಾಗಿ ಎಲ್ಲ ಕ್ರಮ ವಹಿಸಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ. ಅಲ್ಲದೆ ಮೂರನೆ ಡೋಸ್ ವ್ಯಾಕ್ಸಿನ್ ಬಗ್ಗೆ ಕೇಂದ್ರದ ಜೊತೆ ಚರ್ಚೆ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಚರ್ಚೆ ನಡೆಸುತ್ತಿದೆ. ಮೂರನೆ ಡೋಸ್ ನೀಡುವ ಬಗ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಲಿದೆ. ಕೇಂದ್ರದ ಸೂಚನೆ ಬಂದ ನಂತರ ರಾಜ್ಯದಲ್ಲಿ ಮೂರನೆ ಡೋಸ್ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೂರನೆ ಡೋಸ್ ಕೇಂದ್ರದ ಸೂಚನೆಗೆ ವೇಟಿಂಗ್
