ರಾಜ್ಯ ಬಜೆಟ್: ಶಿವಮೊಗ್ಗಕ್ಕೆ ಸಿಹಿಕಹಿ 

ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಪ್ರಥಮ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್‌ನಲ್ಲಿ ಶಿವಮೊಗ್ಗಕ್ಕೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಶಿವಮೊಗ್ಗಕ್ಕೆ ಕೆಲವು ಯೋಜನೆಗಳು ಮಾತ್ರ ಸಿಕ್ಕಿವೆ.

ಜೋಗದಲ್ಲಿ ಹೋಟೆಲ್ ಮತ್ತು ರೋಪ್ ವೇ ಅಭಿವೃದ್ಧಿಗೆ 116 ಕೋಟಿ, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ, ಶ್ರೀ ನಾರಾಯಣ ಗುರು ವಸತಿ ಶಾಲೆ, ಕೇಂದ್ರ ಸರ್ಕಾರದ ಪ್ರಯೋಜಿತ ಎನ್‌ಎಸ್‌ಡಿಎಫ್ ಯೋಜನೆಯಡಿ ನಗರದಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಲು 20 ಕೋಟಿ ಅನುದಾನ ಮೀಸಲಿಡಲಾಗಿದೆ. ಹಾಗೂ ಶಿವಮೊಗ್ಗದಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ ಆಯುಷ್ ವಿಶ್ವವಿದ್ಯಾಲಯವನ್ನು ಬಲಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಇನ್ನು ಶಿವಮೊಗ್ಗದ ಜನರ ನಿರೀಕ್ಷೆಗಳಾಗಿದ್ದ ಅಡಕೆ ಸಂಶೋಧನೆ-ಅಭಿವೃದ್ಧಿ ಕೇಂದ್ರ, ಎಂಪಿಎಂ ಪುನರುಜ್ಜೀವನ, ಪಶುವೈದ್ಯಕೀಯ ವಿವಿ ಸ್ಥಾಪನೆ ಹೀಗೆ ಹಲವು ನಿರೀಕ್ಷೆಗಳು ಹುಸಿಯಾಗಿವೆ.