ಜನವರಿ 28ಕ್ಕೆ ಸೋರುತಿಹುದು ಸಂಬಂಧ ನಾಟಕ ಪ್ರದರ್ಶನ 

ಶಿವಮೊಗ್ಗ : ಹೊಂಗಿರಣ ರಂಗತಂಡದಿಂದ ರೈತರೇ ಅಭಿನಯಿಸಿರುವ ಸೋರುತಿಹುದು ಸಂಬಂಧ ನಾಟಕ ತಯಾರಾಗಿದ್ದು, ಜನವರಿ 28ರಂದು ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ನಾಟಕದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ, ಬೆಳಲೆಕಟ್ಟೆ ಗ್ರಾಮದಲ್ಲಿ ಒಂದೂವರೆ ತಿಂಗಳಿನಿಂದ ರಂಗ ತರಬೇತಿ ಶಿಬಿರ ಆಯೋಜನೆ ಮಾಡಿ ಈ ನಾಟಕ ತಾಲೀಮು ನಡೆಸಲಾಗಿದೆ. ಜನವರಿ 28ರಂದು ಪ್ರದರ್ಶನವಾಗಲಿರುವ ಈ ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಗ್ರಾಮೀಣ ಕಲಾವಿದರನ್ನ ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡರು.