ಸೊರಬ ಶಾಸಕರ ಕ್ಷೇತ್ರ ಪ್ರವಾಸ 

ಸೊರಬ : ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಕ್ಷೇತ್ರ ಪ್ರವಾಸದಲ್ಲಿ ಫುಲ್ ಬಿಜಿ.  ಪುರ, ಕುಂದಗಸಿವಿ, ಇಂಡಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಆ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಈ ವೇಳೆ ಪಕ್ಷ ಸಂಘಟನೆ, ಬಗರ್ ಹುಕುಂ, ನೀರಾವರಿ, ಗ್ರಾಮಗಳ ಸಮಸ್ಯೆಗಳ ಕುರಿತು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

ಇನ್ನು ಉಳಿವಿ ಮಹಾಶಕ್ತಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಅಲ್ಲಿ, ಅಧ್ಯಕ್ಷ ನೀಲಕಂಠ ಮನೆಗೆ ನಾಮಫಲಕ ಅಳಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರದ ಕಾರ್ಯಕ್ರಮಗಳನ್ನ ಬೂತ್ ಮಟ್ಟದ ಕಾರ್ಯಕರ್ತನ ಮನೆಗೆ ತಲುಪಿಸಬೇಕು. ಈ ಉದ್ದೇಶದಿಂದ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸಲಾಗಿದೆ. ಬೂತ್ ಗೆದ್ದರೆ, ಪಕ್ಷ ಗೆಲ್ಲುತ್ತದೆ. ಬೂತ್ ಅಧ್ಯಕ್ಷನ ಮನೆ ಕೇಂದ್ರ ಬಿಂದುವಿದ್ದಹಾಗೆ ಸರ್ಕಾರದ ಸಾಧನೆಗಳು ಮನೆ ಮಾತಾಗಬೇಕು. ಪ್ರತಿಯೊಬ್ಬರಿಗೂ ಅವುಗಳು ತಲುಪುವಂತ ಕೆಲಸ ಆಗಬೇಕು ಎಂದರು.