ಶಿವಮೊಗ್ಗ : ಬಾತ್‌ರೂಂ ಅಂಡರ್‌ಗ್ರೌಂಡ್ ಪೈಪ್‌ನಲ್ಲಿ ಸೇರಿಕೊಂಡು ಕಳೆದ ಮೂರು ತಿಂಗಿಳಿನಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಹಾವನ್ನ ಹಿಡಿಯಲಾಗಿದೆ.
ಮಾದರಿ ಪಾಳ್ಯದ ಮನೆಯೊಂದರಲ್ಲಿ, ರಾತ್ರಿ ೧ ಗಂಟೆಗೆ ಮನೆಯವರೊಬ್ಬರು ಬಾತ್ ರೊಂಗೆ ಹೋಗಿದ್ದಾರೆ. ಆಗ ಹಾವು ಕಾಣಿಸಿಕೊಂಡಿದೆ. ತಕ್ಷಣವೇ ಭಯದಿಂದ ಸ್ನೇಕ್ ಕಿರಣ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ನೇಕ್ ಕಿರಣ್ ಸ್ಥಳಕ್ಕಾಗಮಿಸಿ ಹಾವನ್ನ ಹಿಡಿಯಲು ಹೋದಾಗ, ಹಾವು ಮತ್ತೆ ಕಣ್ಣಾಮುಚ್ಚಾಲೆ ಆಟ ಶುರುಮಾಡಿದೆ. ಸತತ ಪ್ರಯತ್ನದ ಬಳಿಕ ಕೊನೆಗೂ ಕಿರಣ್ ಹಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಹಾವನ್ನ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.