ಚಾಲುಕ್ಯನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಆಭರಣ ಹಾವು

ಶಿವಮೊಗ್ಗ : ಬೆಳಗ್ಗೆ 6.30ರ ವೇಳೆಗೆ ಚಾಲುಕ್ಯನಗರದ ಚೌಡೇಶ್ವರಿ ದೇವಾಸ್ಥಾನ ಶುಚಿ ಮಾಡಲು ಹೋದ ಸರಸಮ್ಮಗೆ ಸರ್ರೆಂದು ಸದ್ದು ಕೇಳಿಸಿದೆ. ಏನದು ಸೌಂಡು ಅಂತ ನೋಡಿದ್ರೆ ಗರ್ಭಗುಡಿಯ ಬಳಿ ಅಪರೂಪದ ಆಭರಣ ಹಾವೊಂದು ಕಾಣಿಸಿಕೊಂಡಿದೆ. ಹೌದು ದೇವಾಲಯದಲ್ಲಿ ಪೂಜಾ ಸಾಮಾಗ್ರಿಗಳ ನಡುವೆ ಹೋಗಿ ಸೇರಿಕೊಂಡು ಅತ್ತಿತ್ತ ಹರಿದಾಡ್ತಾಯಿದ್ದ ಹಾವನ್ನು ನೋಡಿದ ಸರಸಮ್ಮ ಭಯ ಪಟ್ಟಿದ್ದಾರೆ.

ಕೂಡಲೇ ದೇವಸ್ಥಾನದ ಆಡಳಿತ ಮಂಡಳಿಯವರು ಉರಗ ತಜ್ಞ ಸ್ನೇಕ್ ಕಿರಣ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಿರಣ್ ಸುಮಾರು ಎರಡು ಅಡಿ ಉದ್ದದ ಹಾವನ್ನು ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಹಾವಿನ ಕುರಿತು ಮಾಹಿತಿ ನೀಡಿದ ಅವರು, ಆಭರಣ ಹಾವು ನೋಡೋದಕ್ಕೆ ಕೊಳಕು ಮಂಡಲದ ಹಾವಿನಂತೆ ಕಾಣುತ್ತೆ. ಆದ್ರೆ ಇದು ಅಪರೂಪದ ಹಾವು ಹಾಗೂ ವಿಷರಹಿತ ಹಾವು ಎಂದು ತಿಳಿಸಿದರು.