ರೈತರ ಮೇಲಿನ ದಾಳಿಗೆ ಶಿವಮೊಗ್ಗ ಸಂಯುಕ್ತ ಕಿಸಾನ್ ಮೋರ್ಚಾ ಖಂಡನೆ 

ಶಿವಮೊಗ್ಗ: ಉತ್ತರ ಪ್ರದೇಶದ ಖಲೀಂಪುರ ಖೇರಿಯಲ್ಲಿ ನಡೆದಿರುವ ಘಟನೆಯನ್ನು ಶಿವಮೊಗ್ಗ ಸಂಯುಕ್ತ ಕಿಸಾನ್ ಮೋರ್ಚಾ ತೀವ್ರವಾಗಿ ಖಂಡಿಸಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕೇಂದ್ರ ಸಚಿವ ಅಜಯ್ ಮಿಶ್ರ ತೆಲಿ ಅವರ ಬೆಂಗಾವಲು ವಾಹನ ಹರಿಸಿ ಕೆಲವು ರೈತರ ಹತ್ಯೆ ಮಾಡಿರುವುದು ಮತ್ತು ಇನ್ನೂ ಕೆಲವು ರೈತರು ಗಾಯಗೊಳ್ಳುವಂತೆ ಮಾಡಿರುವುದು ಘೋರವಾದ ಕೃತ್ಯವಾಗಿದೆ. ಹಾಗಾಗಿ ರೈತರ ಮೇಲಿನ ಈ ದಾಳಿ ಹಾಗೂ ಮಾರಣಹೋಮಕ್ಕೆ ಕಾರಣವಾದ ಕೇಂದ್ರ ಸಚಿವ ಅರುಣ್ ಮಿಶ್ರಾ ತೆನಿ ಮತ್ತು ಈ ಘಟನೆಯ ವಿಚಾರದಲ್ಲಿ ನಿರ್ಲಕ್ಷö್ಯ ಮತ್ತು ಕರ್ತವ್ಯಲೋಪ ಎಸಗಿರುವ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಶಿವಮೊಗ್ಗ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.