ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ 

ಶಿವಮೊಗ್ಗ : ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಎಸ್. ಈಶ್ವರಪ್ಪ, ಬೆಂಗಳೂರಿನತ್ತ ಪಯಣ ಬೆಳೆಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ರಾಜೀನಾಮೆ ಪತ್ರವನ್ನು ಈಶ್ವರಪ್ಪ ನೀಡಲಿದ್ದಾರೆ.

ಈ ನಡುವೆ ರಾಜೀನಾಮೆ ನೀಡಬೇಡಿ ಎಂದು ಬೆಂಬಲಿಗರು ಒತ್ತಡ ಹಾಕುತ್ತಿದ್ದಾರೆ. ಅಲ್ಲದೆ ನೂರಾರು ಬೆಂಬಲಿಗರು ಕಾರ್‌ಗಳ ಮೂಲಕ ಈಶ್ವರಪ್ಪ ಅವರ ಜೊತೆಯಲ್ಲಿಯೇ ಬೆಂಗಳೂರಿನ ಕಡೆ ಹೊರಟಿದ್ದಾರೆ. ಅಭಿಮಾನಿಗಳು, ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದು, ಬೆಂಗಳೂರಿನಲ್ಲೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಒತ್ತಡ ಹಾಕಲಿದ್ದಾರೆ.