ಶಿವಮೊಗ್ಗ : ಸಿಟಿ ಬಸ್ ನಿಲ್ದಾಣದ ಬಳಿ ಪ್ರತಿ ಮಂಗಳವಾರ ಕೋಳಿ ಸಂತೆ ನಡೆಯುತ್ತದೆ. ವ್ಯಾಪಾರಿಗಳು ಚಿತ್ರದುರ್ಗ, ಹೊನ್ನಾಳಿಯಿಂದ ನಾಟಿ ಕೋಳಿಗಳನ್ನು ತಂದು ಇಲ್ಲಿ ಮಾರಾಟ ಮಾಡ್ತಾರೆ. ಸುಮಾರು 40ವರ್ಷಗಳಿಂದ ಈ ವ್ಯಾಪಾರಿಗಳು ಇಲ್ಲಿ ವ್ಯಾಪಾರ ಮಾಡ್ತಾಯಿರುವುದು ವಿಶೇಷ. ಹಲವು ಗ್ರಾಹಕರು ಪ್ರತಿ ವಾರವೂ ಇವರ ಬಳಿಯೇ ಬಂದು ಕೋಳಿ ಖರೀಧಿ ಮಾಡಿ ಹೋಗ್ತಾರೆ.
ಮುಂಚೆ ಎಲ್ಲಾ ವ್ಯಾಪಾರ ಚೆನ್ನಾಗಿ ಇತ್ತು. ಇವಾಗ ಡಲ್ ಆಗಿದೆ. ಬೀದಿ ಬದಿ ಕೋಳಿ ವ್ಯಾಪಾರ ಮಾಡಿ ಜೀವನ ಸಾಗಿಸ್ತಾಯಿರುವ ನಮಗೆ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡ್ತಾಯಿಲ್ಲ ಎಂದು ವ್ಯಾಪಾರಿಗಳು ನೋವು ತೋಡಿಕೊಂಡರು.